ರುಚಿಯಾದ ಮೊಸರುವಡೆ; ಇಲ್ಲಿದೆ ಸರಳ ವಿಧಾನ
ಬೆಳಗ್ಗೆ ಸಂಜೆ ಮಕ್ಕಳು ತಿನ್ನಲು ಏನು ಮಾಡಬೇಕು ಎಂಬುದೇ ಪಾಲಕರ ಸಮಸ್ಯೆಯಾಗಿರುತ್ತದೆ. ಆದರೆ ಇದೀಗ ನೀವು ಮಕ್ಕಳಿಗೆ ರುಚಿರುಚಿಯಾದ ಮೊಸರುವಡೆ ಮಾಡಿ ಕೊಡಬಹುದು ಮನೆಯಲ್ಲೇ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ
ಸಂಜೆ ತಿಂಡಿ ಹೊರಗಡೆ ತಿನ್ನುವ ಬದಲು, ಮನೆಯಲ್ಲೇ ಸುಲಭವಾಗಿ, ರುಚಿಯಾಗಿ ಮೊಸರುವಡೆ ಮಾಡಬಹುದು. ಇದು ಎಲ್ಲಾವಯೋಮಾನದವರಿಗೂ ಇಷ್ಟವಾಗುತ್ತದೆ. ಆರೋಗ್ಯಕ್ಕೂ ಹಾಳಲ್ಲಾ.
ಬೇಕಾಗುವ ಸಾಮಗ್ರಿಗಳು ;
1 ಕಪ್ ಉದ್ದಿನ ಬೇಳೆ
ಅರ್ಧ ಕಪ್ ಖಾರದ ಪುಡಿ
ಅರ್ಧ ಕಪ್ ಹುರಿದ ಜೀರಿಗೆ
1 ಚಮಚ ಸಕ್ಕರೆ ಪುಡಿ
1 ಚಮಚ ಜೀರಿಗೆ
1 ಚಮಚ ಇಂಗು
1 ಚಮಚ ಉಪ್ಪು
1/2 ಕಪ್ ಪುದೀನಾ ಚಟ್ನಿ
1/2 ಕಪ್ ಹುಣಸೆ ಚಟ್ನಿ
250 ಗ್ರಾಮ್ ಮೊಸರು
1 ಲೋಟ ನೀರು
ಕರಿಯಲು ಎಣ್ಣೆ
ಮಾಡುವ ವಿಧಾನ
ಉದ್ದಿನ ಬೇಳೆಯನ್ನು 6-7 ಗಂಟೆಗಳ ಕಾಲ ನೆನೆಯಿಡಿ.
ನೆನೆಸಿಕೊಂಡ ಉದ್ದಿನ ಬೇಳೆಗೆ ಸ್ವಲ್ಪ ನೀರನ್ನು ಸೇರಿಸಿ, ದಪ್ಪವಾದ ಸ್ಥಿರತೆಯಲ್ಲಿ ರುಬ್ಬಿಕೊಳ್ಳಿ. ಮೊಸರನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದರೊಂದಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಪುಡಿಯನ್ನು ಸೇರಿಸಿ.- ನಂತರ ಬೀಟರ್ ಸಹಾಯದಿಂದ ಯಾವುದೇ ಗಂಟು ಅಥವಾ ಉಂಡೆಗಳಿಲ್ಲದಂತೆ ನುಣುಪಾಗಿ ಬೀಟ್ ಮಾಡಿಕೊಳ್ಳಿ.( ಮಿಕ್ಸಿ ಮಾಡಬಹುದು)
ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆಯ ಪೇಸ್ಟ್, ಸ್ವಲ್ಪ ಉಪ್ಪು, ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ ಒಣ ದ್ರಾಕ್ಷಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಸೇರಿಸಿ, ಪಕ್ಕಕ್ಕೆ ಇಡಿ.
ಎಣ್ಣೆ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.- ಎಣ್ಣೆ ಬಿಸಿಯಾದ ಬಳಿಕ, ಕೈಗಳನ್ನು ನೀರಿನಲ್ಲಿ ಅದ್ದಿಕೊಂಡು ಉದ್ದಿನ ಮಿಶ್ರಣವನ್ನು ವಡೆಯ ಆಕಾರದಲ್ಲಿ ಎಣ್ಣೆಗೆ ಬಿಡಿ.
ಎಣ್ಣೆಯಲ್ಲಿ ವಡೆಯು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು ನಂತರ ವಡೆಯನ್ನು ಒಂದು ಪಾತ್ರೆಗೆ ವರ್ಗಾಯಿಸಿ ಬಳಿಕ ಪಕ್ಕಕ್ಕೆ ಇಟ್ಟುಕೊಂಡ ನೀರಿನಲ್ಲಿ ವಡೆಯನ್ನು ಹಾಕಿ 5-10 ನಿಮಿಷಗಳ ಕಾಲ ನೆನೆಯಿಡಿ.
ನಂತರ ವಡೆಯನ್ನು ಹಿಂಡಿ, ನೀರನ್ನು ತೆಗೆದು, ಒಂದು ಪ್ಲೇಟ್ಗೆ ವರ್ಗಾಯಿಸಿ. ಪ್ಲೇಟ್ ಅಲ್ಲಿ ಇಟ್ಟ ವಡೆಗೆ ಮೊಸರು, ಕಪ್ಪು ಉಪ್ಪು, ಜೀರಿಗೆ ಪುಡಿ, ಮೆಣಸಿನ ಪುಡಿ, ಹಸಿರು ಚಟ್ನಿ, ಹುಣಸೆ ಹಣ್ಣಿನ ಚೆಟ್ನಿ ಸೇರಿಸಿ ಅಗತ್ಯಕ್ಕೆ ಅನುಗುಣವಾಗಿ ಜೀರಿಗೆ ಪುಡಿ, ಮೆಣಸಿನ ಪುಡಿಯನ್ನು ಹೆಚ್ಚು ಸೇರಿಸಿಕೊಳ್ಳಬಹುದು.ಮೊಸರು ಮಿಶ್ರಣದಿಂದ ಕೂಡಿದ ವಡೆಯನ್ನು ಸವಿಯಲು ನೀಡಿ.