ರಾಕಿ ಭಾಯ್ ಬಗ್ಗೆ ನುಡಿದ ಸ್ಪೋಟಕ ಭವಿಷ್ಯ ನಿಜವಾಗುತ್ತಾ?

ಕೆಜಿಎಫ್ 2 ಯಶಸ್ಸಿನ ಬಳಿಕ ಇದೀಗ ಜ್ಯೋತಿಷಿಗಳು ರಾಕಿಂಗ್​ ಸ್ಟಾರ್​ ಯಶ್​ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್​ ಅವರ ಭವಿಷ್ಯ ನುಡಿಯುತ್ತಿದ್ದಾರೆ.ಇದೀಗ ರಾಕಿ ಭಾಯ್​ ಅವರ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ವಿಚಾರ ನೋಡಿದ ಅಭಿಮಾನಿಗಳು ನಿಜಕ್ಕೂ ಇದು ಆಗುತ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಯಶ್ ಈಗ ಎಲ್ಲಾ ಭಾಷೆಯಲ್ಲೂ ಪ್ರಸಿದ್ಧಿ ಮತ್ತು ಹೆಸರು ಪಡೆದಿದ್ದು, ಅಭಿಮಾನಿಗಳ ಬಳಗ ಹೆಚ್ಚಿಸಿಕೊಂಡಿದ್ದಾರೆ ಹಾಗಾಗಿ ಈ ಭವಿಷ್ಯ ಸತ್ಯ ಆಗಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಶೋಮಾರ್ಗ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನ ಮಾಡುತ್ತಿದ್ದಾರೆ. ಹೀಗಾಗಿ ಹಲವರು ಬಾರಿ ಯಶ್ ರಾಜಕೀಯಕ್ಕೆ ಬರಬಹುದು ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಸದ್ಯ ರಾಜಕೀಯದಿಂದ ದೂರ ಉಳಿದಿರೋ ಯಶ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ.

ಯಶ್ ರಾಜಕಿಯಕ್ಕೆ ಬರುತ್ತಾರಂತೆ ಅದೂ ದಶಕಗಳ ನಂತರ. ಹೀಗಂತ ಬೆಂಗಳೂರಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಯಶ್, ಶಾರೂಕ್ ಖಾನ್ ತರ ದೊಡ್ಡ ಸ್ಟಾರ್ ಆಗ್ತಾರಂತೆ, ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡ್ತಾರೆ ಎಂದು ಜ್ಯೋತಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಇದು ನಿಜವಾಗುತ್ತಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಹಲವು ಬಾರಿ ಯಶ್ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆದರೂ ಯಶ್ ತಲೆಕೆಡಸಿಕೊಳ್ಳದೆ ಸಿನಿಮಾದಲ್ಲೇ ಮುದುಂವರೆಯುತ್ತಿದ್ದಾರೆ. ಈಗ ಈ ಭವಿಷ್ಯ ನಿಜವಾಗುತ್ತಾ ಕಾದುನೋಡಬೇಕು. ಯಶ್ ಮುಂದಿನ ನಡೆಯ ಮೇಲೆ ಹೆಚ್ಚಿನ ಕುತೂಹಲ ಹುಟ್ಟಿಕೊಂಡಿದೆ. 

Leave A Reply

Your email address will not be published.