ಚಪಾತಿ, ರೊಟ್ಟಿ ತಯಾರಿಸಲು ವ್ಯಥೆ ಪಡುತ್ತಿದ್ದೀರಾ ?? | ಚಿಟಿಕೆ ಹೊಡೆಯುವುದರಲ್ಲಿ ಮಿಕ್ಸಿಂಗ್ ನಿಂದ ಹಿಡಿದು ಬೇಯಿಸುವುದನ್ನೂ ಮಾಡುವ ರೋಟಿ ಮೇಕರ್ ಯಂತ್ರ ಮಾರುಕಟ್ಟೆಗೆ ಲಗ್ಗೆ
‘ಕೈ ಕೆಸರಾದರೆ ಬಾಯಿ ಮೊಸರು’ಎಂಬ ಗಾದೆಯಂತೆ ಕಷ್ಟ ಪಟ್ಟು ದುಡಿದರೇನೇ ನೆಮ್ಮದಿಯಾಗಿ ಉಣ್ಣಬಹುದು. ಹೀಗೆಯೇ ತಿನ್ನಲು ರುಚಿಯಾಗಿರುವ ಪದಾರ್ಥದ ಹಿಂದೆ ಅಷ್ಟೇ ಶ್ರಮ ವಹಿಸಬೇಕಾಗುತ್ತದೆ. ಅದರಲ್ಲಿ ‘ಚಪಾತಿ’ ಕೂಡ ಒಂದು. ಇದು ತಿನ್ನಲು ಎಷ್ಟು ಟೇಸ್ಟಿಯಾಗಿರುತ್ತೋ ಅದನ್ನು ಮಾಡೋರಿಗಂತೂ ಅಯ್ಯೋ ಅನಿಸೋದ್ರಲ್ಲಿ ಡೌಟ್ ಇಲ್ಲ. ಯಾಕಂದ್ರೆ ಇದನ್ನು ಮಾಡೋರಿಗೆ ಗೊತ್ತು ಅದರ ವ್ಯಥೆ.
ಇದೀಗ ಚಪಾತಿ, ರೊಟ್ಟಿ ತಯಾರಿಸಲು ವ್ಯಥೆ ಪಡೋರಿಗಾಗಿಯೇ ಬಂದಿದೆ ಯಂತ್ರ.ಹೌದು. ಚಪಾತಿ ಲಟ್ಟಿಸಿದ್ರೆ ಅಮೆರಿಕಾನೋ, ಆಸ್ಟ್ರೇಲಿಯಾ ಖಂಡದ ಹಾಗೆಯೋ ಆಕಾರ ಬರೋದನ್ನು ತಪ್ಪಿಸಲೆಂದೆ ಬಂದಿದೆ ಈ ರೋಟಿ ಮೇಕರ್ ಯಂತ್ರ..!
ಈ ಯಂತ್ರದಲ್ಲಿ ಹಿಟ್ಟನ್ನು ಮಿಕ್ಸ್ ಮಾಡುವ ಕಷ್ಟ ಕೂಡ ಇಲ್ಲ. ಮಿಕ್ಸಿಂಗ್ ನಿಂದ ಹಿಡಿದು ಚಪಾತಿ ಆಕಾರದಲ್ಲಿ ಸಿದ್ಧವಾಗಿ ಬೇಯಿಸಿಯೇ ಬರುತ್ತದೆ. ರೋಟಿಮ್ಯಾಟಿಕ್ ರೊಟ್ಟಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುತ್ತದೆ. ರೋಟಿಮ್ಯಾಟಿಕ್ ಯಂತ್ರವು ಹಿಟ್ಟನ್ನು ಮಿಶ್ರಣ ಮಾಡೋದ್ರಿಂದ ಹಿಡಿದು, ಅದನ್ನು ಲಟ್ಟಿಸಿ ಪಫಿಂಗ್ ನವರೆಗೆ ಸಿದ್ಧವಾಗಿ ಬರುತ್ತದೆ. ಹಿಟ್ಟು ಮಾಡುವುದರಿಂದ ಹಿಡಿದು, ಎಲ್ಲಾ ಕೆಲಸವನ್ನೂ ನಿಯತ್ತಿನ ಅಡುಗೆ ಕೆಲಸದ ಹೆಂಗಸಿನ ಹಾಗೆ ಮಾಡಿ ಮುಗಿಸಿ ‘ ಹೆಂಗ್ ಸ್ವಾಮಿ ನಾವು? ‘ ಎನ್ನುತ್ತದೆ ಈ ವಂಡರ್ ಮಶೀನ್ !!!
ಅಲ್ಲದೆ ಇದು ಹಲವಾರು ಬಗೆಯ ರೋಟಿಗಳನ್ನು ಮಾಡಬಹುದು. ಸಂಪೂರ್ಣ ಗೋಧಿ ರೊಟ್ಟಿ, ಜೋವರ್ ರೊಟ್ಟಿ, ಬಜ್ರಾ ರೊಟ್ಟಿ, ಪುರಿ, ಪಿಜ್ಜಾ, ಮಲ್ಟಿಗ್ರೇನ್ ರೊಟ್ಟಿ ಇತ್ಯಾದಿ. ಪದಾರ್ಥಗಳನ್ನು ಈ ಯಂತ್ರಕ್ಕೆ ಲೋಡ್ ಮಾಡಿದ್ರೆ, ಸಾಕು ಉಳಿದ ಕೆಲಸವನ್ನು ಇದೇ ಮಾಡುತ್ತದೆ.
ಇದರ ಬೆಲೆ ಬರೋಬ್ಬರಿ ಒಂದು ಲಕ್ಷದ 11 ಸಾವಿರ ರೂಪಾಯಿಗಳು..! ಆದರೆ,ಇದರ ಬೆಲೆ ಕೇಳಿ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಗಾಗಿದ್ದಾರೆ. ಅಬ್ಬಬ್ಬಾ.. ಇದಕ್ಕೆ ಇಷ್ಟೊಂದು ಹಣ ಕೊಡುವ ಬದಲು, ಯಂತ್ರಕ್ಕಿಂತ ವೇಗವಾಗಿ ನಾವೇ ಚಪಾತಿ ತಯಾರಿಸಬಹುದು ಅಂತೆಲ್ಲಾ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.ಎಷ್ಟೇ ಹಣ ನೀಡಿದರೂ ನಮ್ಮ ಕೆಲಸ ಸುಲಭ ಆಗುತ್ತೆ ಆದ್ರೆ ಹಣ ನೀಡುದರಲ್ಲಿ ಏನು ಮಹಾ ಅಲ್ವಾ!?.. ಈ ಯಂತ್ರ ಯಾವ ರೀತಿಲಿ ಇದೆ ಎಂದು ಯೋಚಿಸುವವರಿಗೆ ಇಲ್ಲಿದೆ ನೋಡಿ ರೋಟಿಮ್ಯಾಟಿಕ್ ಯಂತ್ರದ ಅದ್ಭುತ ವಿಡಿಯೋ.