ಹೆಚ್ಚು ತಾಪಮಾನ ಇರುವ ನಗರಗಳು ಇವು !
ಬಿಸಿಲಿನ ಝಳದಿಂದ ಜನತೆಯ ಸ್ಥಿತಿ ಶೋಚನೀಯವಾಗಿದೆ. ಬಿಸಿಗಾಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಹಗಲಿನಲ್ಲಿ ಸುಡು ಬಿಸಿಲು ಹಾಗೂ ಬಿಸಿಲಿನ ಝಳಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿನ ಝಳದಿಂದಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಅತ್ಯಂತ ಬಿಸಿಯಾದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆಚ್ಚು ತಾಪಮಾನ ಇರುವ ನಗರಗಳು ಇಲ್ಲಿವೆ:-
ಬಂದಾ (UP): 47.4°C
ಪ್ರಯಾಗರಾಜ್: 46.8°C
ಶ್ರೀಗಂಗಾನಗರ (ರಾಜಸ್ಥಾನ): 46.4°C
ಚಂದ್ರಾಪುರ (ಮಹಾರಾಷ್ಟ್ರ): 46.4°C
ನೌಗಾಂಗ್ (MP),
ಝಾನ್ಸಿ (UP): 46.2°C
ನಜಾಫ್‌ಗಡ್ ಮತ್ತು ಪಿತಾಂಪುರ (ದೆಹಲಿ): 45.9°C
ಗುರುಗ್ರಾಮ: 45.9°C
ದಾಲ್ತೋಂಗಂಜ್ (ಜಾರ್ಖಂಡ್),
ರಿಡ್ಜ್ (ದೆಹಲಿ): 45.7°C
ವಾರ್ಧಾ (ಮಹಾರಾಷ್ಟ್ರ): 45.5°C
ಖಜುರಾಹೊ (MP): 45.4°C