ಮನೆ ಮಾರಾಟದ ಜೊತೆಗೆ ಪತಿಯೂ ಮಾರಾಟ! ಸಾಮಾಜಿಕ ಜಾಲತಾಣದಲ್ಲಿ ಮನೆ ಜೊತೆಗೆ ಗಂಡನನ್ನೂ ಹರಾಜಿಗಿಟ್ಟ ಪತ್ನಿ!!!

ಯಾರಾದರೂ ಮನೆ ಮಾರಾಟ ಮಾಡುವಾಗ ಗಂಡನನ್ನೇ ಮನೆ ಜೊತೆ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ? ಇಲ್ವಾ ? ಹಾಗಾದರೆ ನಾವು ಹೇಳುತ್ತೇವೆ ನೋಡಿ. ಈಕೆಗೆ ಈ ಹಳೆ ಮನೆ ಜೊತೆ ಬಹುಶಃ ಹಳೆ ಗಂಡನೂ ಬೋರಾಗಿರಬೇಕು. ಹಾಗಾಗಿ ಈ ಜಾಹೀರಾತನ್ನು ನೀಡಿದ್ದಾಳೆ ಅಂತ ಕಾಣಿಸುತ್ತದೆ. ಹೊಸ ಗಂಡನ ಜೊತೆ ಹೊಸ ಮನೆಯಲ್ಲಿ ಇರಲು ಈಕೆಯ ಬಯಕೆ ಇರಬಹುದೇ ? ಏನೀ ವಿಷಯ ಬನ್ನಿ ತಿಳಿಯೋಣ.

 

ಹಳೆ ಮನೆಯಿಂದ ಹೊಸ ಮನೆಗೆ ಪ್ರವೇಶಿಸುವಾಗ ಜನರು ಸಾಮಾನ್ಯವಾಗಿ ಪೀಠೋಪಕರಣಗಳು, ಹಳೆಯ ವಸ್ತುಗಳನ್ನು ಮಾರಾಟ ಮಾಡೋದು ಮಾಮೂಲಿ. ಆದರೆ, ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಮಾಜಿ ಪತಿಯೊಂದಿಗೆ ತನ್ನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾಳೆ.

ತನ್ನ ಮನೆಯನ್ನು ಪಟ್ಟಿ ಮಾಡುವಾಗ, ಈಕೆ ಖರೀದಿದಾರರಿಗೆ ವಿಶಿಷ್ಟವಾದ ಒಪ್ಪಂದವನ್ನು ನೀಡಿದ್ದಾಳೆ. ರಿಚರ್ಡ್‌ ( ಪತಿ) ನನ್ನು ಇರಿಸಿಕೊಳ್ಳಲು ಒಪ್ಪಿಕೊಂಡರೆ, ಬೆಲೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾಳೆ. ಜೊತೆಗೆ ತನ್ನ ಪತಿಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಈತ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾನೆ ಎಂಬ ಸುಳಿವು ಕೂಡಾ ಕೊಟ್ಟು ಎಲ್ಲರ ಮನದಲ್ಲಿ ಆಸೆ ಹುಟ್ಟಿಸಿದ್ದಾಳೆ.

43 ವರ್ಷದ ಕ್ರಿಸ್ಟಲ್ ಬಾಲ್ ಎಂಬಾಕೆ ಫ್ಲೋರಿಡಾದ ಪನಾಮ ಸಿಟಿ ಬೀಚ್ ಪ್ರದೇಶದಲ್ಲಿ ತನ್ನ ಮನೆಯೊಂದನ್ನು $ 699,000 (ಅಂದಾಜು ರೂ. 5.3 ಕೋಟಿ) ಗೆ ಮಾರಾಟಕ್ಕಿಟ್ಟಿದ್ದಾಳೆ. ಮನೆಯು ಪೂಲ್, ಹಾಟ್ ಟಬ್, ಮೂರು ಮಲಗುವ ಕೋಣೆಗಳು ಮತ್ತು ಆಕೆಯ ಮಾಜಿ ಪತಿ 54 ವರ್ಷದ ರಿಚರ್ಡ್ ಚೈಲೊ ಸೇರಿದಂತೆ ಇತರ ಸೌಕರ್ಯಗಳನ್ನು ಹೊಂದಿರುವುದಾಗಿ ತಿಳಿಸಿದ್ದಾಳೆ. ಕ್ರಿಸ್ಟಲ್ ಮತ್ತು ರಿಚರ್ಡ್ ಇತ್ತೀಚೆಗೆ ಬೇರ್ಪಡುವ ಮೊದಲು ಏಳು ವರ್ಷಗಳ ಕಾಲ ಜೊತೆಯಲ್ಲೇ ಇದ್ದರು.

Leave A Reply

Your email address will not be published.