ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ತಾನೊಬ್ಬ ಹೀರೋ ಎಂಬುದನ್ನು ಸಾಬೀತುಪಡಿಸಿದ ರಾಕಿಂಗ್ ಸ್ಟಾರ್ ಯಶ್ !! | ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದು ಕೋಟ್ಯಾಂತರ ಮೌಲ್ಯದ ಜಾಹೀರಾತು ಆಫರ್ ತಿರಸ್ಕರಿಸಿದ ರಾಕಿ ಭಾಯ್

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ವರ್ಲ್ಡ್ ವೈಡ್ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಟ. `ಕೆಜಿಎಫ್ 2′ ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೆನ್ನಲ್ಲೇ ಇದೀಗ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಅನ್ನೋ ದೃಷ್ಟಿಯಿಂದ ಯಶ್‌ ಮಹತ್ವ ನಿರ್ಧಾರ ಕೈಗೊಂಡಿದ್ದು, ಈ ಮೂಲಕ ತಾವು ರಿಯಲ್‌ ಲೈಫ್‌ನಲ್ಲೂ ಹೀರೋ ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಹೌದು. ನ್ಯಾಷನಲ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2′ ಸಕ್ಸಸ್ ಖುಷಿಯಲ್ಲಿದ್ದಾರೆ. ವರ್ಲ್ಡ್ ವೈಡ್ ತಮ್ಮ ಖಡಕ್ ಆಕ್ಟಿಂಗ್ ಮೂಲಕ ಮನೆಮಾತಾಗಿದ್ದಾರೆ. ತೆರೆಯ ಮೇಲೆ ಮಾತ್ರ ನಾನೊಬ್ಬ ಹೀರೋ ಅಲ್ಲ, ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನು ಪ್ರೂವ್ ಮಾಡಿದ್ದಾರೆ.ಕೆಜಿಎಫ್ 1′ ಮತ್ತು `ಚಾಪ್ಟರ್ 2′ ನಂತರ ನಂತರ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಜಾಹಿರಾತನ್ನು ನೀಡುವ ಉದ್ದೇಶದಿಂದ ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಲಾ ಮತ್ತು ಎಲೈಚಿ ಬ್ರ್ಯಾಂಡ್‌ನ ಬಿಗ್ ಆಫರ್‌ನ್ನೇ ಯಶ್ ತಿರಸ್ಕರಿಸಿದ್ದಾರಂತೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ದೇಶದ ಪ್ರತಿಷ್ಠಿತ ಸಂಸ್ಥೆಯೊಂದು ರಾಕಿಂಗ್ ಸ್ಟಾರ್ ಯಶ್ ಅವರನ್ನು ಪಾನ್ ಮಸಲಾ ಮತ್ತು ಎಲೈಚಿ ಬ್ರ್ಯಾಂಡ್‌ನ ರಾಯಭಾರಿಯಾಗಿ ಪ್ರಮೋಟ್ ಮಾಡಲು ಅಪ್ರೋಚ್ ಮಾಡಿತ್ತು. ಆದರೆ ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಾಂತರ ಮೌಲ್ಯದ ಆಫರ್‌ನ್ನೇ ಯಶ್ ಕೈ ಬಿಟ್ಟಿದ್ದಾರೆ.

ಯಶ್ ಅವರನ್ನು ಕೋಟ್ಯಾಂತರ ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ. ಹೀಗಿರುವಾಗ ತಾವು ಪ್ರಚಾರ ಮಾಡೋ ಪ್ರಾಡೆಕ್ಟ್‌ನಿಂದ ಸಮಾಜಕ್ಕೆ ಉಪಯೋಗವಾಗಬೇಕು ಅನ್ನೋದು ಯಶ್ ಯೋಚನೆ. ಸಿನಿಮಾಗಳಲ್ಲಿ ಮಾತ್ರ ಮೆಸೇಜ್ ಕೊಡೋದಲ್ಲ, ರಿಯಲ್ ಲೈಫ್ ನಲ್ಲು ಕೊಡುವ ನಾಯಕನಾಗಿ ಹೊರಹೊಮ್ಮಿದ್ದಾರೆ ಯಶ್. ಈ ಮೂಲಕ ತಾವು ರೀಲ್‌ನಲ್ಲಿ ಮಾತ್ರ ಅಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಅನ್ನೋದನ್ನು ಯಶ್ ಪ್ರೂವ್ ಮಾಡಿದ್ದಾರೆ. ಇನ್ನು ಈ ಸುದ್ದಿ ಕೇಳಿದ್ರಂತೂ ಯಶ್‌ ಅಭಿಮಾನಿಗಳು ಸಲಾಮ್‌ ರಾಕಿಭಾಯ್‌ ಅನ್ನೋದು ಪಕ್ಕಾ ಎಂದೇ ಹೇಳಬಹುದು.

error: Content is protected !!
Scroll to Top
%d bloggers like this: