ಬೆಳ್ತಂಗಡಿ: ಕಾರು ಹಾಗೂ ದ್ವಿಚಕ್ರ ನಡುವೆ ಅಪಘಾತ !! | SDM ಕಾಲೇಜಿನ ಉಪನ್ಯಾಸಕರಿಗೆ ಗಂಭೀರ ಗಾಯ

Share the Article

ದ್ವಿಚಕ್ರವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕುಲಾಲ ಮಂದಿರ ಬಳಿ ಇಂದು ಸಂಜೆ ನಡೆದಿದೆ.

ಗಾಯಗೊಂಡವರನ್ನು ರವಿಶಂಕರ್ (30) ಎಂದು ಗುರುತಿಸಲಾಗಿದೆ.

ಎಸ್ ಡಿಎಂ ಕಾಲೇಜಿನ ಲೆಕ್ಚರರ್ ಆಗಿರುವ ರವಿಶಂಕರ್ ಅವರು ತಮ್ಮ ಪತ್ನಿಯೊಂದಿಗೆ ಉಜಿರೆಯಿಂದ ಪುತ್ತೂರು ಕಡೆಗೆ ಪ್ರಯಾಣ ಬೆಳೆಸಿದ್ದರು. ಕುಲಾಲ ಮಂದಿರ ಬಳಿ ಪುತ್ತೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಶಂಕರ್ ಅವರ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ.

Leave A Reply