ಅಮ್ಮನಿಲ್ಲದ ತಬ್ಬಲಿ ಕಂದಮ್ಮಗಳ ಕರುಣಾಜನಕ ಕಥೆಯಿದು !! | ಶಿಕ್ಷಣಕ್ಕಾಗಿ ತಂಗಿಯನ್ನು ಮಡಿಲಿನಲ್ಲಿ ಇಟ್ಟುಕೊಂಡು ಪಾಠ ಕೇಳಿದ 10 ವರ್ಷದ ಬಾಲಕಿಯ ವೀಡಿಯೋ ವೈರಲ್ | ಈಕೆಯ ನೋವಿಗೆ ಆಸರೆಯಾಗಿ ನಿಂತ ಸೋಶಿಯಲ್ ಮೀಡಿಯಾ

‘ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆಯು ಅದೆಷ್ಟು ಅರ್ಥಪೂರ್ಣವಾಗಿದೆ ಅಲ್ವಾ. ಯಾವುದೇ ಒಂದು ಕೆಲಸವು ನಡೆಯಬೇಕಾದರೆ ನಮಗೆ ಮನಸ್ಸು ಇರಲೇಬೇಕು.ಇಂತಹ ಸಂದರ್ಭದಲ್ಲಿ ಅದು ಎಂತಹ ಕಷ್ಟದ ಕೆಲಸವಾದರೂ ಅದನ್ನು ನಾವು ಸುಲಭವಾಗಿ ಮುಗಿಸಬಹುದು. ಹೌದು.ಈ ಮಾತಿಗೆ ನಿದರ್ಶನವಾಗಿದ್ದಾಳೆ ಈ ಪುಟ್ಟ ಪೋರಿ.

ಈಕೆ ಅಮ್ಮನಿಲ್ಲದ ತಬ್ಬಲಿ. ಆದ್ರೆ ಈಕೆ ತಾಯಿಯ ಸ್ಥಾನವನ್ನು ತುಂಬಿದ ಅಮ್ಮ. ಹೌದು ಈಕೆಯ ಹಠ ತಾನೊಂದು ಶಿಕ್ಷಣವನ್ನು ಕಲಿತು ವಿದ್ಯಾವಂತಳಾಗಬೇಕು ಎಂಬುದು.ಜೊತೆಗೆ ತನ್ನ ತಂಗಿಯನ್ನು ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿ.ಅತ್ತ ಶಿಕ್ಷಣವನ್ನು ಬಿಡದೆ ಇತ್ತ ತಂಗಿಯನ್ನು ಬಿಡದೆ, ಮನಸು ಮಾಡಿದರೆ ಯಾವುದು ಸಾಧ್ಯ ಎಂಬಂತೆ ತನ್ನ ಪುಟ್ಟ ತಂಗಿಯನ್ನು ಮಡಿಲಿನಲ್ಲಿ ಇಟ್ಟುಕೊಂಡು ಈಕೆ ತನ್ನ ಶಿಕ್ಷಣವನ್ನು ಮುಗಿಸಲು ತರಗತಿಗೆ ತೆರಳುತ್ತಾಳೆ.

ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನೋರಂಜನೆಗೆ ಮಾತ್ರವಲ್ಲದೆ ಯಾವುದೇ ಒಂದು ಪ್ರದೇಶದಲ್ಲಿ ನಡೆದ ಕಹಿ ಘಟನೆಯಿಂದ ಹಿಡಿದು ಸಿಹಿ ಘಟನೆಯ ವರೆಗೂ ಎಲ್ಲವೂ ರವಾನೆಯಾಗುತ್ತದೆ. ಇದೀಗ ಈಕೆಯ ಕೈಹಿಡಿದಿದ್ದು ಇದೆ ಸೋಶಿಯಲ್ ಮೀಡಿಯಾ.ಈ ಘಟನೆ ಮಣಿಪುರದಲ್ಲಿ ನಡೆದಿದ್ದು,10 ವರ್ಷದ ಬಾಲಕಿಯೊಬ್ಬಳು ತನ್ನ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ನಿತ್ಯ ಶಾಲೆಗೆ ಹೋಗುತ್ತಿದ್ದಾಳೆ.ಬಾಲಕಿಯ ಈ ಫೋಟೋಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದ್ದು ಅಲ್ಲದೆ,ಭಾರೀ ಪ್ರಭಾವ ಬೀರಿದೆ.

ಅರಣ್ಯ ಮತ್ತು ಪರಿಸರ ಸಚಿವೆ ಬಿಸ್ವಜಿತ್ ಸಿಂಗ್ ಬಾಲಕಿಯೊಬ್ಬಳು, ಎರಡು ವರ್ಷದ ತಂಗಿಯನ್ನು ಮಡಲಲ್ಲಿಟ್ಟುಕೊಂಡು ಶಾಲೆಯಲ್ಲಿ ಪಾಠ ಕೇಳುವ ವೀಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದರ ಜೊತೆ, ಮಣಿಪುರದಂಥ ಈಶಾನ್ಯ ಭಾರತದಲ್ಲಿ ಶಿಕ್ಷಣ, ಹೆಣ್ಣು ಮಕ್ಕಳ ಜೀವನ ಜೊತೆಗೆ ಕಲಿಯುವ ಬದ್ಧತೆ ವಿವಿಧ ಆಯಾಮಗಳಲ್ಲಿ ಚರ್ಚೆಯಾಗಿತ್ತು.

ಚಿಕ್ಕ ಹುಡುಗಿಯೊಬ್ಬಳು ತನ್ನ ಶಿಕ್ಷಣಕ್ಕಾಗಿ ಮತ್ತು ಅವಳ ಸಹೋದರಿಗಾಗಿ ಪರಿತಪಿಸುವುದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.ಇಂಥ ಸಮರ್ಪಿತ ಮಕ್ಕಳು ನಮ್ಮನ್ನು ಮೂಕರನ್ನಾಗಿಸುತ್ತಾರೆ. ಆದರೆ ಈ ರಾಷ್ಟ್ರಕ್ಕೆ ಕಾರಣವಾಗಿರುವಂತಹ ಬಲವಾದ ಮಕ್ಕಳನ್ನು ನಮಗೆ ನೀಡುತ್ತಲೇ ಇರುವ ಈ ರಾಷ್ಟ್ರದ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಬಳಕೆದಾರರು ಬರೆದಿದ್ದಾರೆ.

ಸಾಮಾಜಿಕ ಜಾಲತಾಣ ಗಳಲ್ಲಿ‌ ಫೋಟೋಗಳು ಬಹಿರಂಗವಾಗಿದ್ದಷ್ಟೇ ಅಲ್ಲ, ಅದು ಬಾಲಕಿಯ ನಸೀಬನ್ನೇ ಬದಲಾಯಿಸಿದೆ. ಮಣಿಪುರ ದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್, ಆ ವಿದ್ಯಾರ್ಥಿನಿಯ ಶೈಕ್ಷಣಿಕ ಜೀವನದ ಹೊಣೆ ಹೊತ್ತಿಕೊಂಡಿದ್ದಾರೆ. ಪದವಿ ಮುಗಿಯುವವರೆಗೆ ಬಾಲಕಿಯ ಶಿಕ್ಷಣವನ್ನು ನೋಡಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಬಹಿರಂಗವಾಗುತ್ತಿದ್ದಂತೆ ಸಚಿವರು, ಚಿಕ್ಕ ಹುಡುಗಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಬಾಲಕಿ ಮೈನಿಂಗ್ಸಿನ್ಲಿ ಯು ಅವರನ್ನು ಇಂಫಾಲ್ ಗೆ ಕರೆತರುವಂತೆ ಹೇಳಿದ್ದಾರೆ. ಮೈನಿಂಗ್ಸಿನ್ಲಿಯು ಅವರ ಪದವಿ ಮುಗಿಯುವವರೆಗೆ ಅವರ ಶಿಕ್ಷಣವನ್ನು ನೋಡಿಕೊಳ್ಳುತ್ತಾರಂತೆ ಎಂದಿದ್ದಾರೆ ಸಚಿವ ಸಿಂಗ್.

ನೋಡಿ.ಈಕೆಯ ಜೀವನವೇ ವಿಚಿತ್ರ.ಅದೆಷ್ಟು ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಮನೆಯಲ್ಲೇ ಇದ್ದುಕೊಂಡು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಆದರೆ ಈಕೆ ಅದೆಷ್ಟೇ ಕಷ್ಟ ಬಂದರೂ ನಾ ಎದುರಿಸಬಲ್ಲೆ ಎಂಬ ಒಂದು ಛಲದಿಂದ ಈ ಹಂತದಲ್ಲಿ ಇದ್ದಾಳೆ. ಕಷ್ಟಪಟ್ಟು ದುಡಿದವನಿಗೆ ಒಳ್ಳೆಯ ಫಲ ಸಿಕ್ಕೆ ಸಿಗುತ್ತದೆ ಎಂಬ ಮಾತಿಗೆ ಈಕೆಯೇ ಸಾಕ್ಷಿಯಾಗಿದ್ದಾಳೆ. ಒಟ್ಟಾರೆ ಶ್ರಮದ ಜೊತೆ ಅದೃಷ್ಟವೂ ಬೇಕು ಎಂಬುದನ್ನು ಸಾಧಿಸಿತೋರಿಸಿದ್ದಾಳೆ ಈ ಪೋರಿ.

Leave A Reply

Your email address will not be published.