ಹಾವುಗಳ ರಾಜ ನಾಗರಹಾವಿನ ಎದುರು ಯುದ್ಧಕ್ಕೆ ನಿಂತ ಮುಂಗುಸಿಗಳ ಗುಂಪು !! | ನಾವೇನು ಕಮ್ಮಿ ಇಲ್ಲ ಎಂಬಂತೆ ಮುಂಗುಸಿಗಳು ಹಾವನ್ನು ಸುತ್ತುವರಿದು ಅಟ್ಯಾಕ್ ಮಾಡಿರುವ ವೀಡಿಯೋ ವೈರಲ್
ಪ್ರಪಂಚದಾದ್ಯಂತ ಹಲವು ಜಾತಿಯ ಹಾವುಗಳಿವೆ. ಒಂದಕ್ಕಿಂತ ಒಂದು ಹೆಚ್ಚು ಅಪಾಯಕಾರಿ ಎಂದೇ ಹೇಳಬಹುದು. ಇವುಗಳಲ್ಲಿ ಕಿಂಗ್ ಕೋಬ್ರಾ ಎಂದರೆ ನಾಗರಹಾವನ್ನು ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗುತ್ತದೆ. ನಾಗರಹಾವು ಕಚ್ಚಿದರೆ ಸಾವು ನಿಶ್ಚಿತ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಹಾವಿನ ಜೊತೆ ಕಾಳಗ ಎಂದರೆ ನೆನಪಾಗುವುದೇ ಹಾವು-ಮುಂಗುಸಿ ಜಗಳ. ಇತ್ತೀಚಿಗೆ ನಾಗರ ಹಾವು-ಮುಂಗೂಸಿಗಳ ನಡುವಿನ ಒಂದು ರೋಚಕ ವೀಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ಟ್ರೆಂಡಿಂಗ್ ವೀಡಿಯೋದಲ್ಲಿ ಮರುಭೂಮಿಯಲ್ಲಿ ಮುಂಗುಸಿಗಳ ಸಮೂಹವು ನಾಗರಹಾವನ್ನು ಹೇಗೆ ಸುತ್ತುವರೆದಿದೆ ಎಂಬುದನ್ನು ಕಾಣಬಹುದು.
ಕೆಲವು ಪ್ರಾಣಿಗಳು ಹಾವುಗಳನ್ನು ತಮ್ಮ ಬೇಟೆಯನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಮುಂಗುಸಿಯದ್ದು ಎಂದರೆ ತಪ್ಪಾಗಲಾರದು. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಮುಂಗುಸಿಯಂತೆ ಕಾಣುವ ಹಲವು ಪ್ರಾಣಿಗಳು ಹಾವುಗಳ ರಾಜ ನಾಗರಹಾವನ್ನು ಸುತ್ತುವರೆದಿವೆ.
ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಮುಂಗುಸಿಯಂತೆ ಕಾಣುವ ಅನೇಕ ಪ್ರಾಣಿಗಳು ಮರುಭೂಮಿಯಲ್ಲಿ ತಿರುಗಾಡುತ್ತಿರುವುದನ್ನು ನೀವು ನೋಡಬಹುದು. ಅಲ್ಲಿ ಹಾಯಾಗಿ ಕುಳಿತಿರುವ ನಾಗರಹಾವು ಕೂಡ ಗೋಚರಿಸುತ್ತದೆ. ಮುಂಗುಸಿಯ ಒಂದು ಕಣ್ಣು ಅಪಾಯಕಾರಿಯಾಗಿ ಕಾಣುವ ನಾಗರಹಾವಿನ ಮೇಲೆ ಬೀಳುತ್ತದೆ. ಬಳಿಕ ಈ ಪ್ರಾಣಿಗಳು ಹೊಂಚು ಹಾಕಿ ನಾಗರಹಾವನ್ನು ಅಟ್ಯಾಕ್ ಮಾಡಲು ಅದನ್ನು ಸುತ್ತುವರೆಯುತ್ತವೆ. ಕಿಂಗ್ ಕೋಬ್ರಾ ಕೂಡ ಭಯಂಕರ ರೀತಿಯಲ್ಲಿ ಅದರ ಮೇಲೆ ಪ್ರತೀಕಾರಕ್ಕೆ ಮುಂದಾಗುತ್ತದೆ. ನೋಡು ನೋಡುತ್ತಿದ್ದಂತೆ ಮುಂಗುಸಿಗಳಂತೆ ಕಾಣುವ ಈ ಪ್ರಾಣಿಯ ಗುಂಪು ಎಲ್ಲಾ ಕಡೆಯಿಂದ ನಾಗರಹಾವನ್ನು ಸುತ್ತುವರೆಯುತ್ತವೆ.
ನ್ಯಾಷನಲ್ ಜಿಯೋಗ್ರಾಫಿಕ್ ಯುಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇದುವರೆಗೆ 96 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ವೀಡಿಯೊದಲ್ಲಿ ಮುಂಗುಸಿಯಂತೆ ಕಾಣುವ ಪ್ರಾಣಿಗಳನ್ನು ಮೀರ್ಕಟ್ ಎಂದು ಕರೆಯಲಾಗುತ್ತದೆ ಮತ್ತು ಅವು ಆಫ್ರಿಕಾದಲ್ಲಿ ಕಂಡುಬರುತ್ತವೆ. ಅವುಗಳನ್ನು ಸಣ್ಣ ಮುಂಗುಸಿ ಎಂದೂ ಕರೆಯುತ್ತಾರೆ.