ಪ್ರಧಾನಿ ಮೋದಿ ಭಾಗವಹಿಸಿದ್ದ ಸಮಾವೇಶದ ಬಳಿ ಭಾರಿ ಸ್ಪೋಟ!

ಏಪ್ರಿಲ್​ 24ರ ಪಂಚಾಯತ್​ ರಾಜ್​ ದಿವಸದಂದು ಜಮ್ಮುವಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದೀಗ ಅದರ ಸಮೀಪವೇ ಸ್ಫೋಟ ಸಂಭವಿಸಿದೆ.

ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಸಮಾವೇಶ ನಡೆದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತಿಯಿಂದ 12 ಕಿ.ಮೀ ದೂರದಲ್ಲಿರುವ ಜಮ್ಮುವಿನ ಲಾಲಿಯಾನ ಗ್ರಾಮದ ಅಂಗಳದಲ್ಲಿ ಈ ಸ್ಫೋಟ ಸಂಭವಿಸಿದೆ. ಉಲ್ಕಾಶಿಲೆಯ ಅಪ್ಪಳದಿಂದ ಕುಳಿ ಸಂಭವಿಸಿದೆ ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು ಆದರೆ ಇದೀಗ ಆರ್‌ಡಿಎಕ್ಸ್ ಮತ್ತು ನೈಟ್ರೇಟ್ ಸಂಯೋಜನೆಯ ಕುರುಹುಗಳು ಪತ್ತೆಯಾಗಿವೆ.

ಆರ್ಟಿಕಲ್​ 370 ಮತ್ತು 35ಎ ಅನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿದ್ದು, ಘಟನೆಯ ಖಚಿತತೆಗಾಗಿ ತನಿಖೆ ನಡೆಯುತ್ತಿದೆ. 

Leave A Reply

Your email address will not be published.