ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲೆಟ್ ಧೈರ್ಯದಿಂದ ತಪ್ಪಿದ ಭಾರಿ ಅಪಘಾತ

150 ಪ್ರಯಾಣಿಕರನ್ನು ಹೊತ್ತ ಥಾಯಿ ವಿಮಾನ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಲವೇ ಹೊತ್ತಿನಲ್ಲಿ ಇಳಿಯಬೇಕಿತ್ತು. ಲ್ಯಾಂಡಿಂಗ್​​ ಆಗುವ ಕೆಲವೇ ಹೊತ್ತಿನಲ್ಲಿ ವಿಮಾನದ ಟೈರ್​ ಸ್ಫೋಟಗೊಂಡಿತ್ತಾದರೂ ಪೈಲೆಟ್​ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಮುಂದಾಗಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.

ಥಾಯ್ ಏರ್‌ವೇಸ್‌ನ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಟೈರ್ ಸ್ಫೋಟಗೊಂಡಿದ್ದು, ಭಾರಿ ಅವಘಡವೊಂದು ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.‌ ಟೈರು ಸ್ಫೋಟಗೊಂಡು ವಿಮಾನದಲ್ಲಿದ್ದವರು ಆತಂಕದಲ್ಲಿದ್ದರು. ಪೈಲೆಟ್​​ ಹೆದರದೇ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಗಾಳಿಯಲ್ಲಿ ಸ್ಫೋಟ ಸಂಭವಿಸಿದ್ದು ಪೈಲಟ್‌ಗಳ ಗಮನಕ್ಕೆ ಬಂದಿದೆ.ನಿಲ್ದಾಣದ ಕಂಟ್ರೋಲರ್​ ಅಧಿಕಾರಿಗಳಿಗೆ ಪೈಲೆಟ್​ ಮಾಹಿತಿ ರವಾನಿಸಿದ್ದಾರೆ. ಸದ್ಯ ಪವಾಡಸದೃಶರಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.