ಇಬ್ಬರು ಮಕ್ಕಳ ಬೇಸಿಗೆ ರಜೆಯ ಮಜಾ ಕಸಿದ ಕಣ್ಣಾಮುಚ್ಚಾಲೆ ಆಟ !! | ಐಸ್ ಕ್ರೀಮ್ ಬಾಕ್ಸ್ ನಲ್ಲಿ ಅವಿತು ಉಸಿರುಗಟ್ಟಿ ಮಕ್ಕಳ ಸಾವು | ಪೋಷಕರೇ ಮಕ್ಕಳ ಮೇಲಿರಲಿ ಹೆಚ್ಚಿನ ಗಮನ

Share the Article

ಬೇಸಿಗೆ ರಜೆಯ ಮಜಾ ಸವಿಯುತ್ತಿದ್ದ ಇಬ್ಬರು ಮಕ್ಕಳ ಪ್ರಾಣಕ್ಕೆ ಆಟವೇ ಮುಳ್ಳಾಗಿದೆ. ಮಕ್ಕಳ ಮೇಲೆ ಗಮನ ಇರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಇಂದು ಮಕ್ಕಳಿಬ್ಬರು ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಭಾಗ್ಯ (12) ಮತ್ತು ಕಾವ್ಯಾ (7) ಸಾವಿಗೀಡಾದ ಮಕ್ಕಳು.

ನಾಗರಾಜು ಮತ್ತು ಚಿಕ್ಕದೇವಮ್ಮ ದಂಪತಿಯ ಪುತ್ರಿ ಭಾಗ್ಯ, ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯಾ ಇಂದು ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಈ ಸಂದರ್ಭದಲ್ಲಿ ಈ ಬಾಲಕಿಯರು ಐಸ್‌ಕ್ರೀಮ್ ಬಾಕ್ಸ್‌ನಲ್ಲಿ ಹೋಗಿ ಅವಿತುಕೊಂಡಿದ್ದರು. ಆದರೆ ಅದನ್ನು ತೆರೆದು ವಾಪಸ್ ಹೊರಬರಲಾಗದೆ ಉಸಿರುಗಟ್ಟಿ ಸಾವಿಗೀಡಾದ ದುರಂತ ಘಟನೆ ನಡೆದಿದೆ.

ಸುಮಾರು ಎರಡು ಗಂಟೆ ಕಳೆದರೂ ಮಕ್ಕಳು ಕಾಣಿಸಿರಲಿಲ್ಲ. ಕೆಲವೆಡೆ ಹುಡುಕಿ ಬಳಿಕ ಐಸ್‌ಕ್ರೀಮ್ ಬಾಕ್ಸ್ ತೆರೆದು ನೋಡಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಸಗೆ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಆದರೆ ಸದ್ಯ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Leave A Reply