ಪಿಎಸ್‌ಐ ನೇಮಕಾತಿ ಇನ್ನೊಬ್ಬ ಆರೋಪಿ ಬಂಧನವಾಗಿದ್ದೇ ವಿಚಿತ್ರ !

ಪಿಎಸ್‌ಐ‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ದಾಖಲಾತಿ ಪರಿಶೀಲನೆಗೆ ಹೋಗಿದ್ದ ಅಭ್ಯರ್ಥಿ ಸಿಐಡಿ ಅಧಿಕಾರಿಗಳಿ ಬಳಿ ಲಾಕ್ ಆಗಿದ್ದೆ ವಿಚಿತ್ರವಾಗಿದೆ.

 

ಸಿಐಡಿ ಅಧಿಕಾರಿಗಳಿಂದ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಹೆದರಿಯೇ ಆರೋಪಿ ಸುನೀಲ್​ ಲಾಕ್ ಆಗಿದ್ದಾನೆ.

ನೋಟಿಸ್​ ನೀಡಿದ ಹಿನ್ನೆಲೆಯಲ್ಲಿ ಮೊನ್ನೆ (ಏ.25) ಕಲಬುರಗಿ ಮೂಲದ ಸುನೀಲ್ ಬೆಂಗಳೂರಿನ ಸಿಐಡಿ ಕಚೇರಿಗೆ ಹೋಗಿದ್ದ.

ಸಿಐಡಿ ಅಧಿಕಾರಿಗಳ ಮುಂದೆ ಹಾಜಾರಾದ ವೇಳೆ ಹೆದರಿದ ಸುನೀಲ್​ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಸುನೀಲ್ ಹೇಳಿಕೆಯ ಆಧಾರ ಮೇಲೆ ಸಿಐಡಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಎನ್​.ವಿ. ಸುನೀಲ್​ ಅಕ್ರಮದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ನ ಅಕ್ರಮದ ಅಭ್ಯರ್ಥಿಯಾಗಿದ್ದಾನೆ.

ಆರ್​.ಡಿ.ಪಾಟೀಲ್, ಸುನೀಲ್​ಗೆ ಬ್ಲೂಟೂತ್ ಡಿವೈಸ್​ ನೀಡಿ ಪರೀಕ್ಷೆ ಬರೆಯಿಸಿದ್ದ. ಇದಕ್ಕಾಗಿ 40 ಲಕ್ಷ ರೂ. ಹಣ ಪಡೆದುಕೊಂಡಿದ್ದ. ಬ್ಲೂಟೂತ್ ಬಳಸಿ ಎಕ್ಸಾಮ್​ನಲ್ಲಿ ಪಾಸ್ ಆಗಿರುವುದಾಗಿ ಸುನೀಲ್​ ಹೇಳಿಕೆ ನೀಡಿದ್ದಾರೆ. ಇಡಿ ಪ್ರಕರಣದಲ್ಲಿ ಇದೊಂದೆ ಅಭ್ಯರ್ಥಿ ಸಿಐಡಿಗೆ ಹೆದರಿ ಲಾಕ್ ಆಗಿರುವುದು. ಸದ್ಯ ಸುನೀಲ್ ಬಂಧನದ ಬಳಿಕ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.