ಪೊಲೀಸರ ಜೇಬಿಗೇ ಕತ್ತರಿ ಹಾಕಿದ ಖತರ್ನಾಕ್ ಕಳ್ಳರು !! | ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ಪೊಲೀಸರ ಅಪಾರ ಮೌಲ್ಯದ ಸೊತ್ತುಗಳು ಕಳವು

Share the Article

ಪೊಲೀಸರ ಜೇಬಿಗೆ ಕತ್ತರಿ ಹಾಕಿದ ಚಾಲಾಕಿ ಕಳ್ಳರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಪೊಲೀಸರ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಕೆಎಸ್‌ಐಎಸ್ಎಫ್ ಒಂದನೇ ಬೆಟಾಲಿಯನ್ ಪೊಲೀಸ್ ನಿರೀಕ್ಷಕ ಮಂಜುನಾಥ, ಚಂದ್ರಶೇಖರ, ಶರಣಬಸಪ್ಪ, ಚಿರಂಜೀವಿ, ತ್ರಿಣೇಶ ಎಂಬುವವರು ಪ್ರವಾಸಕ್ಕೆಂದು ಭಾನುವಾರ ಮಲ್ಪೆ ಬೀಚ್‌ಗೆ ಬಂದಿದ್ದರು. ಅಲ್ಲಿ ತಮ್ಮ ಬ್ಯಾಗ್ ಸಹಿತ ಸೊತ್ತುಗಳನ್ನು ಸಮುದ್ರ ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿದ್ದರು. ವಾಪಾಸ್ಸು ಬಂದು ನೋಡಿದಾಗ ಅವರ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.

ಮೂರು ಕಾಲೇಜು ಬ್ಯಾಗ್, 4 ಸೆಲೋನ್, 5 ವಾಲೆಟ್ಸ್, ಎಟಿಎಂ ಕಾರ್ಡ್, ಆಧಾರ್‌ಕಾರ್ಡ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಡಿಎಲ್, ಚಂದ್ರಶೇಖರರ ಪೊಲೀಸ್ ಐಡಿ ಕಾರ್ಡ್ ಕಳ್ಳತನವಾಗಿದ್ದು, ಇವುಗಳ ಒಟ್ಟು ಮೌಲ್ಯ 70,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply