ಬರೋಬ್ಬರಿ 30 ವರ್ಷಗಳಿಂದ ಈ ಹೋಟೆಲ್ ನ ಶೌಚಾಲಯದಲ್ಲೇ ತಯಾರಾಗುತ್ತಿದ್ದಂತೆ ಸಮೋಸ !! | ಕೊನೆಗೂ ಈ ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು

ಯಾವುದೇ ಹೋಟೆಲ್ ಇರಲಿ ಅಥವಾ ಬೇಕರಿ ಇರಲಿ ಅವುಗಳಿಗೆ ಅದರದ್ದೇ ಆದ ಸ್ವಚ್ಛತಾ ನಿಯಮಗಳಿವೆ. ಕೆಲವೊಮ್ಮೆ ಶುಚಿತ್ವದಲ್ಲಿ ಯಾವುದೇ ರೀತಿಯ ಕೊರತೆಯಾದರೆ ಅಂತಹ ಅಂಗಡಿಗಳಿಗೆ ಬೀಗ ಜಡಿಯಲಾಗುತ್ತದೆ. ಹೀಗಿರುವಾಗ ವಿದೇಶಗಳಲ್ಲಿ ಶೌಚಾಲಯದ ನೀರು ಬಳಸಿಕೊಂಡು ಅಡುಗೆ ಮಾಡುತ್ತಾರಂತೆ !!

ಹೌದು. ಶೌಚಾಲಯದ ನೀರು ಬಳಸಿ ಆಹಾರ ತಯಾರಿಸುವುದು ಮಧ್ಯಮ ರಾಷ್ಟ್ರಗಳಲ್ಲಿ ಸಾಮಾನ್ಯ. ಆದರೆ ಶ್ರೀಮಂತ ರಾಷ್ಟ್ರಗಳ ಹಾಗೂ ಶುಚಿತ್ವದಲ್ಲಿ ಹೆಸರು ಪಡೆದುಕೊಂಡಿರುವ ಸೌದಿ ಅರೇಬಿಯಾದಲ್ಲೂ ಸಹ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಶೌಚಾಲಯದಲ್ಲಿ ಸಮೋಸ ಮಾಡಿ ಮಾರಾಟ ಮಾಡುತ್ತಿದ್ದ ಸೌದಿ ಅರೇಬಿಯಾದ ರೆಸ್ಟೋರೆಂಟ್‌ನ್ನು ಸದ್ಯ ಮುಚ್ಚಿಸಲಾಗಿದೆ. ಅಧಿಕಾರಿಗಳು ದಾಳಿ ನಡೆಸಿದ ವೇಳೆ ಶೌಚಾಲಯದ ಸಮೋಸಾ ಸೇರಿದಂತೆ ಇತರೆ ಚಾಟ್‌ಫುಡ್‌ಗಳನ್ನು ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಕೂಡಲೇ ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಇದು ಇಂದು ನಿನ್ನೆಯದಲ್ಲ. ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲೇ ಸಮೋಸಾ ತಯಾರಿಸಲಾಗುತ್ತಿತ್ತು ಎಂಬ ಆಘಾತಕಾರಿ ಅಂಶವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಕೂಡ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೇ ಆಹಾರ ಇಲಾಖೆಯಿಂದ ನೀಡಲಾಗುವ ಲೈಸನ್ಸ್ ಕೂಡ ಅಕ್ರಮದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೆಸ್ಟೋರೆಂಟ್‌ನ್ನು ಈ ಹಿಂದೆಯೂ ಮುಚ್ಚಿಸಲಾಗಿತ್ತು.

Leave A Reply

Your email address will not be published.