ತಪ್ಪಿ ಕಾಲು ತುಳಿದದ್ದಕ್ಕೆ ಸ್ಸಾರಿ ಎಂದರೂ ಕರಗಲಿಲ್ಲ ಆತನ ಮನಸ್ಸು !! | ಒಂದೇ ಒಂದು ಪಂಚ್ ನಿಂದ ವ್ಯಕ್ತಿಯನ್ನು ಕೊಂದೇಬಿಟ್ಟ ಡೇಂಜರಸ್ ಬಾಡಿ ಬಿಲ್ಡರ್

Share the Article

ತಪ್ಪಿ ಇನ್ನೊಬ್ಬರ ಕಾಲು ತುಳಿಯೋದು ಸಾಮಾನ್ಯ. ನಾವು ‘ಸ್ಸಾರಿ’ಅನ್ನೋ ಪದವನ್ನು ಬಳಸಿ ಅದನ್ನ ಮರೆಯುತ್ತೇವೆ. ಆದ್ರೆ ಇಲ್ಲೊಂದು ಕಡೆ ನೈಟ್‌ಕ್ಲಬ್‌ನಲ್ಲಿ ಆಕಸ್ಮಿಕವಾಗಿ ತನ್ನ ಕಾಲನ್ನು ತುಳಿದ ಎಂಬ ಕಾರಣಕ್ಕೆ 36 ವರ್ಷದ ವ್ಯಕ್ತಿಯನ್ನು ಬಾಡಿಬಿಲ್ಡರೊಬ್ಬ ಒಂದೇ ಗುದ್ದಿನಿಂದ ಹೊಡೆದು ಕೊಂದಿರುವ ಭಯಾನಕ ಘಟನೆ ನಡೆದಿದೆ.

ಮೃತನನ್ನು ಇಬ್ಬರು ಮಕ್ಕಳ ತಂದೆ ರಾಬರ್ಟ್ ಸ್ಮೆಥರ್ಸ್ಟ್ ಎಂದು ಗುರುತಿಸಲಾಗಿದೆ.

ಬಾಡಿಬಿಲ್ಡರ್ ರಾಬರ್ಟ್ ಓವನ್ ಗ್ರೀನ್‌ಹಾಲ್ಗ್ ಹಾಗೂ ರಾಬರ್ಟ್ ಸ್ಮೆಥರ್ಸ್ಟ್ ಇಬ್ಬರೂ ಇಂಗ್ಲೆಂಡ್‌ನ ಬೋಲ್ಟನ್ ಟೌನ್‌ನಲ್ಲಿರುವ ಒಂದೇ ನೈಟ್‌ಕ್ಲಬ್‌ಗೆ ಆಗಮಿಸಿದ್ದರು. ಸಂಸ್ಥೆಯೊಂದರಲ್ಲಿ ಕಂಪನಿಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸ್ಮೆಥರ್ಸ್ಟ್ ತಮ್ಮ ಹುಟ್ಟುಹಬ್ಬವನ್ನು ಲಕ್ಸ್‌ನಲ್ಲಿ ಆಚರಿಸಲು ಬಂದಿದ್ದರು.ಆ ದಿನ ರಾತ್ರಿ 11:15 ರ ಸುಮಾರಿಗೆ ಸ್ಮೆಥರ್ಸ್ಟ್ ಆಕಸ್ಮಿಕವಾಗಿ ಬಾಡಿಬಿಲ್ಡರ್ ಕಾಲನ್ನು ತುಳಿದಿದ್ದಾರೆ. ಹೀಗಾಗಿ, ಸ್ಮೆಥರ್ಸ್ಟ್ ಕ್ಷಮೆಯಾಚಿಸಿದರು.ಆದರೂ ಸಮಾಧಾನ ಆಗದ ಬಾಡಿಬಿಲ್ಡರ್, ಕ್ಲಬ್‌ನ ಬೂತ್‌ನಿಂದ ಎದ್ದುನಿಂತು ಅಲ್ಲಿದ್ದ ಸ್ಮೆಥರ್ಸ್ಟ್ ಮತ್ತು ಬೇಟ್ಸ್ ಇಬ್ಬರಿಗೂ ಗುದ್ದಿದ್ದಾನೆ.ಈ ವೇಳೆ ಸ್ಮೆಥರ್ಸ್ಟ್ ಮೆದುಳಿನ ಆಘಾತವನ್ನು ಅನುಭವಿಸಿ, ಕೇವಲ ಒಂದು ಗಂಟೆಯ ನಂತರ ಸಾವನ್ನಪ್ಪಿದ್ದಾರೆ.

ಘಟನೆಯ ರಾತ್ರಿ ಗ್ರೀನ್‌ಹಾಲ್ಗ್ ಅವರು ಕೊಕೇನ್ ಮತ್ತು ಮದ್ಯ ಸೇವಿಸಿದ್ದರು ಎಂದು ವರದಿ ತಿಳಿಸಿದ್ದು,ಈ ವಿಷಯವನ್ನು ನ್ಯಾಯಾಲಯದ ಮುಂದೆ ತರಲಾಗಿದೆ.ಗ್ರೀನ್‌ಹಾಲ್ಗ್‌ಗೆ 11 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ನ್ಯಾಯಾಧೀಶರು ‘ಅಪಾಯಕಾರಿ(‘ ಎಂದು ಘೋಷಿಸಿದ್ದು,ಆರಂಭದಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತಾದರೂ ನಂತರ ನರಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.

Leave A Reply