ತಲೆಯಲ್ಲಿ ರಕ್ತದೋಕುಳಿ, ಮೈಮೇಲೆ ಹರಿದ ಬಟ್ಟೆ !! | ಕಿರುತೆರೆ ನಟಿಯ ಈ ಅವಾಂತರ ನೋಡಿ ಶಾಕ್ ಆದ ಅಭಿಮಾನಿಗಳು

ಒಮ್ಮೊಮ್ಮೆ ನಟಿಯರು ತಮ್ಮ ಪಾತ್ರಗಳ ಕುರಿತಾದ ಗಂಭೀರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ. ಆದರೆ ಕೆಲವು ಅಭಿಮಾನಿಗಳು ಅದನ್ನು ಗಂಭೀರವಾಗಿಯೇ ಪರಿಗಣಿಸುತ್ತಾರೆ. ಅಂತೆಯೇ ಕಿರುತೆರೆಯ ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೀಡಿಯೋ ಅಭಿಮಾನಿಗಳನ್ನು ಶಾಕ್ ಗೆ ತಳ್ಳಿದೆ.

ಸ್ವತಃ ರಂಜನಿ ಅವರೇ ಈ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ಜನ ” ಅಯ್ಯೋ ರಂಜನಿಯವರಿಗೆ ಏನಾಯ್ತಪ್ಪ, ತಲೆಯಿಂದ ಈ ಪಾಟಿ ರಕ್ತ ಸುರೀತಿದ್ಯಲ್ಲಾ!’ ಎಂದು ಶಾಕ್ ಆಗಿದ್ದಾರೆ. ಆಮೇಲೆ ಗೊತ್ತಾಗಿದ್ದು, ರಂಜನಿ ಅವರು ಶೇರ್ ಮಾಡಿರುವ ವುಡಿಯೋ ಶೂಟಿಂಗ್ ವೇಳೆ ಮಾಡಿದ್ದು ಎಂದು.

https://www.instagram.com/reel/CcnnlRupzlU/?igshid=YmMyMTA2M2Y=

ಹೌದು. ಕನ್ನಡತಿ ಧಾರವಾಹಿ ಮಹತ್ವದ ಹಂತ ತಲುಪಿದ್ದು, ಭುವಿ (ರಂಜನಿ) ಅವರನ್ನು ಬೆಟ್ಟದಿಂದ ತಳ್ಳುವ ದೃಶ್ಯವಿದೆ. ಆ ಸೀನ್ ಗಾಗಿ ರಂಜನಿ ತಲೆಯಿಂದ ರಕ್ತ ಸುರಿಸಿಕೊಂಡಿದ್ದಾರೆ. ವೀಡಿಯೋದ ನಿಜ ವಿಷಯ ಗೊತ್ತಾದ ಮೇಲೆ ಅಭಿಮಾನಿಗಳು ವಿವಿಧ ಕಾಮೆಂಟ್ ಗಳನ್ನು ಮಾಡಿದ್ದಾರೆ. ವೀಡಿಯೋ ಮಾತ್ರ ಲಕ್ಷಾಂತರ ವೀಕ್ಷಣೆ ಪಡೆದಿದೆ.

Leave A Reply

Your email address will not be published.