ಏಪ್ರಿಲ್ 30ಕ್ಕೆ ಈ ವರ್ಷದ ಮೊದಲ ಸೂರ್ಯಗ್ರಹಣ !! | ಭಾರತದ ಮೇಲೆ ಈ ಗ್ರಹಣದ ಪ್ರಭಾವ !??
ಸೂರ್ಯಗ್ರಹಣದ ಬಗ್ಗೆ ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ವಿಷಯ ಯಾವಾಗಲೂ ಜನರ ಕುತೂಹಲಕ್ಕೆ ಕಾರಣವಾಗುತ್ತವೆ. ಅಂತೆಯೇ 2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಅಂದರೆ ವೈಶಾಖ ಅಮವಾಸ್ಯೆಯ ದಿನದಂದು ಸಂಭವಿಸಲಿದೆ.
ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಸೇರಿದಂತೆ ಇನ್ನಿತರ ಸಂದರ್ಭಗಳ ಬಗ್ಗೆ ಗ್ರಹಗತಿಗಳ ಲೆಕ್ಕಾಚಾರದ ಮೂಲಕವೇ ತಿಳಿದುಕೊಳ್ಳಲಾಗುತ್ತದೆ. ಇದರ ಬಗ್ಗೆ ಪಂಚಾಂಗದಲ್ಲಿ ಉಲ್ಲೇಖವಾಗಿರುತ್ತದೆ. ಇವೆಲ್ಲ ಲೆಕ್ಕಾಚಾರಗಳೂ ಸಹ ಗ್ರಹಗತಿಗಳ ಆಧಾರದ ಮೇಲೆ ನಡೆಯುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣಕ್ಕೆ ರಾಹು ಕಾರಣವಾದರೆ, ಚಂದ್ರ ಗ್ರಹಣಕ್ಕೆ ಕೇತು ಕಾರಣವಾಗಲಿದೆ. ಸೂರ್ಯಗ್ರಹಣ ಯಾವತ್ತೂ ಅಮಾವಾಸ್ಯೆ ದಿನದಂದು ಸಂಭವಿಸುತ್ತದೆ.
ಸೂರ್ಯಗ್ರಹಣ ಎಲ್ಲಿ ನಡೆಯುತ್ತದೆ?
ಸೂರ್ಯಗ್ರಹಣವು ಏಪ್ರಿಲ್ 30 ರ ಶನಿವಾರ ಮಧ್ಯಾಹ್ನ 12:15 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 1 ರ ಭಾನುವಾರದಂದು ಬೆಳಿಗ್ಗೆ 04:07 ರವರೆಗೆ ಮುಂದುವರಿಯುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಕಂಡುಬರುವುದಿಲ್ಲ. ಆದರೆ ಅಟ್ಲಾಂಟಿಕ್, ಅಂಟಾರ್ಕ್ಟಿಕಾ, ದಕ್ಷಿಣ ಅಮೆರಿಕಾದ ನೈಋತ್ಯ ಭಾಗ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಕಾಣಿಸುತ್ತದೆ.
ಸೂರ್ಯಗ್ರಹಣದ ದಿನ ಏನು ಮಾಡಬೇಕು?
ಸೂರ್ಯಗ್ರಹಣದ ದಿನ ಆಹಾರ ಪದಾರ್ಥಗಳಿಗೆ ತುಳಸಿ ಹಚ್ಚುವುದರಿಂದ ಕಲುಷಿತವಾಗುವುದಿಲ್ಲ ಎಂಬ ನಂಬಿಕೆ ಇದೆ. ಇದಲ್ಲದೆ, ನೀವು ಭಗವಾನ್ ಸೂರ್ಯನ ಆರಾಧನೆಗಾಗಿ ಮಂತ್ರ-ಜಪ ಅಥವಾ ಪಠಣ ಇತ್ಯಾದಿಗಳನ್ನು ಮಾಡಬೇಕು. ಮಂತ್ರಗಳನ್ನು ಪಠಿಸುವುದರಿಂದ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಇದರೊಂದಿಗೆ ಸಂಪತ್ತು, ಶಾಂತಿ ಮತ್ತು ಸಾಧನೆಗಾಗಿ ಮಂತ್ರಗಳ ಪಠಣವೂ ಸಹ.
ಸೂರ್ಯಗ್ರಹಣದ ದಿನ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
ಸೂರ್ಯಗ್ರಹಣದ ಸಮಯದಲ್ಲಿ ಜೀರ್ಣಶಕ್ತಿ ದುರ್ಬಲವಾಗುತ್ತದೆ. ಆದ್ದರಿಂದ ಸೂರ್ಯಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬೇಡಿ. ಗ್ರಹಣದ ಸಮಯದಲ್ಲಿ, ತನ್ನನ್ನು ಮತ್ತು ವಿಶೇಷವಾಗಿ ಗರ್ಭಿಣಿಯರನ್ನು ಗ್ರಹಣದ ನೆರಳಿನಿಂದ ರಕ್ಷಿಸಬೇಕು. ಇದರ ಹೊರತಾಗಿ, ದೇವರನ್ನು ಪೂಜಿಸುವುದನ್ನು ತಪ್ಪಿಸಿ ಮತ್ತು ದೇವರನ್ನು ಮನಸ್ಸಿನಲ್ಲಿ ಮಾತ್ರ ಸ್ಮರಿಸಿ.