ರೋಸ್ ವಾಟರ್  ಮನೆಯಲ್ಲೇ ತಯಾರಿಸಲು ಇಲ್ಲಿದೆ ಸರಳ ವಿಧಾನ

Share the Article

ರೋಸ್ ವಾಟರ್  ಹೆಂಗಳೆಯರ ಮನಗೆದ್ದಿದ್ದು ಹಲವಾರು ಜನರು ಇದನ್ನು ಬಳಸುತ್ತಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಲು ಇಲ್ಲಿದೆ ರೆಸಿಪಿ

ರೋಸ್ ವಾಟರ್ ನಿಮ್ಮ ಸ್ಕಿನ್ ಗೆ ಬ್ಯೂಟಿ ಫ್ರೆಂಡ್ ಅಂತಾನೆ ಹೇಳಬಹುದು. ನೈಸರ್ಗಿಕವಾಗಿರೋ ಈ ರೋಸ್ ವಾಟರ್ ಬಳಸೋದ್ರಿಂದ ನಿಮ್ಮ ಚರ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಮುಖದ ಕಾಂತಿ ಹೆಚ್ಚಿಸಬಹುದು.

ಮಾಡುವ ವಿಧಾನ

*ಕೆಂಪು ಬಣ್ಣದ ಪರಿಮಳ ಭರಿತ ಗುಲಾಬಿಗಳನ್ನು ಹಾರಿಸಿಕೊಳ್ಳಿ. ಅದರಲ್ಲೂ ನೀವು ಮನೆಯಲ್ಲಿ ಗುಲಾಬಿ ಬೆಳಸಿದ್ದರೆ ಇನ್ನೂ ಒಳ್ಳೆಯದು.

*ಗುಲಾಬಿಗಳನ್ನು ಮೂರ್ನಾಲ್ಕು ಬಾರಿ ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅದರ ದಳಗಳನ್ನು ತೆಗೆದು ಇಟ್ಟುಕೊಳ್ಳಿ.

*ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ. ನಂತರ ಒಲೆಯನ್ನು ಆರಿಸಿ ಬಿಡಿ. ಈ ಬಿಸಿನೀರನ್ನು ಒಲೆಯಿಂದ ಇಳಿಸಿ ದ ನಂತರ ತೊಳೆದ ಗುಲಾಬಿ ದಳಗಳನ್ನು ಹಾಕಿ ಮುಚ್ಚಳ ಮುಚ್ಚಿ ಒಂದು ಅರ್ಧ ಗಂಟೆ ಹಾಗೆ ಬಿಡಿ.

*ನಂತರ ಗುಲಾಬಿ ಈ ನೀರನ್ನು ಸೋಸಿ ಒಂದು ಡಬ್ಬಿಯಲ್ಲಿ ಶೇಖರಿಸಿ. ಈಗ ರೋಸ್ ವಾಟರ್ ಪರಿಮಳ ವಾಗಿಯೂ ಶುದ್ದವಾಗಿಯಯೂ ಇರುತ್ತದೆ.

Leave A Reply