ನಾಲ್ಕು ವರ್ಷದ ಹೆಣ್ಣು ಮಗು ವಿಸ್ಕಿ ಕುಡಿದು ಸಾವು| ಈ ಘಟನೆಯ ಹಿಂದಿದೆ ಅಜ್ಜಿ ಹಾಗೂ ತಾಯಿಯ ಕೈವಾಡ
ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿರುವ ಘಟನೆ ಲೂಸಿಯಾನದ ಬ್ಯಾಟನ್ನಲ್ಲಿ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ನೋಡುತ್ತಿರುವಾಗಲೇ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮಗು ಮದ್ಯ ಸೇವಿಸಿರುವ ಪರಿಣಾಮ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಆರೋಪಿಗಳಾದ ಅಜ್ಜಿ ಹಾಗೂ ಮಗುವಿನ ತಾಯಿಯನ್ನು ಬಂಧಿಸಲಾಗಿದೆ.
ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ತೀವ್ರವಾದ ಅಲ್ಕೋಹಾಲ್ ಸೇವನೆಯಿಂದ ಮಗು ಸಾವನ್ನಪ್ಪಿದ್ದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.