ಎಸ್ ಬಿಐ ಗ್ರಾಹಕರೇ ಹುಷಾರ್| ಈ ಎರಡು ನಂಬರಿಂದ ಕರೆ ಅಥವಾ ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ!
ನವದೆಹಲಿ: ಜಗತ್ತು ಟೆಕ್ನಾಲಾಜಿಯತ್ತ ದಾಪುಗಾಲು ಹಿಡುತ್ತಿದ್ದಂತೆಯೇ ಆನ್ಲೈನ್ ವಂಚನೆಗಳ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಜನರಿಗೆ ಸುಲಭವಾಗಲಿ ಎಂದು ಹಲವಾರು ಆನ್ಲೈನ್ ಟೆಕ್ನಾಲಜಿ ಗಳನ್ನು ಜಾರಿಗೊಳಿಸಿದರೆ, ಇದೀಗ ಈ ಆನ್ಲೈನ್ ವಹಿವಾಟುಗಳೇ ಜನರಿಗೆ ಸಂಕಟ ತಂದಿದೆ. ಇಂತಹ ಪ್ರಕರಣಗಳಿಂದ ಗ್ರಾಹಕರಿಗೆ ರಕ್ಷಣೆಯನ್ನು ನೀಡಲು ಬ್ಯಾಂಕುಗಳು ಮುನ್ನೆಚ್ಚರಿಕಾ ಕ್ರಮಗಳನ್ನು ನೀಡುತ್ತಲೇ ಬಂದಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮತ್ತೊಂದು ಎಚ್ಚರಿಕೆಯ ಕರೆಯನ್ನು ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಈ ಎರಡು ಮೊಬೈಲ್ಫೋನ್ ನಂಬರ್ಗಳಿಂದ ಕರೆ ಬಂದರೆ ಹುಷಾರು ಎಂದು ಮುನ್ನೆಚ್ಚರಿಕೆಯನ್ನು ನೀಡಿದೆ.ಎಸ್ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್ಗಳು ಬ್ಯಾಂಕ್ಗೆ ಸಂಬಂಧಪಟ್ಟದಲ್ಲ ಎಂದು ಸ್ಪಷ್ಟನೆ ನೀಡಿದೆ.ಆ ನಂಬರ್ಗಳ ಕರೆ ಮತ್ತು ಮೆಸೇಜ್ಗಳಿಗೆ ಪ್ರತಿಕ್ರಿಯಿಸಬಾರದು ಎಂದು ಎಸ್ಬಿಐ ತಿಳಿಸಿದೆ.