ಎಸ್ ಬಿಐ ಗ್ರಾಹಕರೇ ಹುಷಾರ್| ಈ ಎರಡು ನಂಬರಿಂದ ಕರೆ ಅಥವಾ ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ!

ನವದೆಹಲಿ: ಜಗತ್ತು ಟೆಕ್ನಾಲಾಜಿಯತ್ತ ದಾಪುಗಾಲು ಹಿಡುತ್ತಿದ್ದಂತೆಯೇ ಆನ್ಲೈನ್ ವಂಚನೆಗಳ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಜನರಿಗೆ ಸುಲಭವಾಗಲಿ ಎಂದು ಹಲವಾರು ಆನ್ಲೈನ್ ಟೆಕ್ನಾಲಜಿ ಗಳನ್ನು ಜಾರಿಗೊಳಿಸಿದರೆ, ಇದೀಗ ಈ ಆನ್ಲೈನ್ ವಹಿವಾಟುಗಳೇ ಜನರಿಗೆ ಸಂಕಟ ತಂದಿದೆ. ಇಂತಹ ಪ್ರಕರಣಗಳಿಂದ ಗ್ರಾಹಕರಿಗೆ ರಕ್ಷಣೆಯನ್ನು ನೀಡಲು ಬ್ಯಾಂಕುಗಳು ಮುನ್ನೆಚ್ಚರಿಕಾ ಕ್ರಮಗಳನ್ನು ನೀಡುತ್ತಲೇ ಬಂದಿದೆ. ಇದೀಗ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮತ್ತೊಂದು ಎಚ್ಚರಿಕೆಯ ಕರೆಯನ್ನು ನೀಡಿದೆ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ,ಈ ಎರಡು ಮೊಬೈಲ್​ಫೋನ್​ ನಂಬರ್​ಗಳಿಂದ ಕರೆ ಬಂದರೆ ಹುಷಾರು ಎಂದು ಮುನ್ನೆಚ್ಚರಿಕೆಯನ್ನು ನೀಡಿದೆ.ಎಸ್​​ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್​ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್​ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್​ಗಳು ಬ್ಯಾಂಕ್​ಗೆ ಸಂಬಂಧಪಟ್ಟದಲ್ಲ ಎಂದು ಸ್ಪಷ್ಟನೆ ನೀಡಿದೆ.ಆ ನಂಬರ್​ಗಳ ಕರೆ ಮತ್ತು ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬಾರದು ಎಂದು ಎಸ್​ಬಿಐ ತಿಳಿಸಿದೆ.

Leave A Reply

Your email address will not be published.