ಇತ್ತೀಚಿನ ಮದುವೆಗಳ ವೀಡಿಯೋಗಳು ಸಖತ್ ಮಜ ಕೊಡುತ್ತೆ. ಒಬ್ಬೊಬ್ಬರ ವಿಭಿನ್ನ ಯೋಚನೆಗಳು, ಪ್ಲ್ಯಾನಿಂಗ್ ಇದೆಲ್ಲ ಈ ಮದುವೆ ಸಮಾರಂಭದಲ್ಲಿ ಎದ್ದು ಕಾಣುತ್ತದೆ. ಜೀವಮಾನದಲ್ಲಿ ಒಂದು ಸಲ ಮದುವೆಯಾಗುವುದು. ಅದನ್ನೇ ಬಹಳ ಯೋಚನೆ ಮಾಡಿ, ನೆನಪಿನಲ್ಲಿ ಉಳಿಯುವಂತೆ ಮಾಡುವುದು ಬಹಳ ಕಠಿಣವೇ ಸರಿ.
ವಧು ವರರು ತಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಸ್ಪರ್ಧಾತ್ಮಕವಾಗಿ ವಿನೂತನ ಪ್ರಯತ್ನಗಳಿಗೆ ಕೈ ಹಾಕುತ್ತಿರುವುದನ್ನು ನಾವು ನೋಡಬಹುದು. ಇದು ಅವರ ಉಡುಗೆಯಾಗಿರಲಿ ಅಥವಾ ವಧು ವರರ ಗ್ರ್ಯಾಂ ಡ್ ಎಂಟ್ರಿ ಆಗಿರಲಿ, ಎಲ್ಲವೂ ಅತ್ಯುತ್ತಮವಾಗಿರಬೇಕೆಂದು ಇಷ್ಟಪಡುತ್ತಾರೆ. ಅಂಥದ್ದೇ ಒಂದು ಮದುವೆಯ ವೀಡಿಯೋ ಇದು.
ನವ ವಧು ವರರು ತಮ್ಮ ಮದುವೆ ಸಮಾರಂಭಕ್ಕೆ ನೀಡುವ ಗ್ರ್ಯಾಂಡ್ ಎಂಟ್ರಿಯಿಂದಾಗಿ ವೈರಲ್ ಆಗಿದೆ ಈ ವೀಡಿಯೋ. ಅದರಲ್ಲಂತೂ ಮದುವೆಯಲ್ಲಿ ನವ ವಧುಗಳು ಹಿಂದೆಂದೂ ಯಾರೂ ಮಾಡದ ವಿನೂತನ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಆದ್ದರಿಂದ ಹಿಂದೆಂದೂ ನೋಡಿರದ ವಧುವಿನ ಗ್ರಾಂಡ್ ಎಂಟ್ರಿಯನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಧು ಸಾಮಾನ್ಯವಾಗಿ ತನ್ನ ತಂದೆ, ತಾಯಿ ಮತ್ತು ಕುಟುಂಬ ಸದಸ್ಯರು ಅಥವಾ ಒಂದು ಭವ್ಯವಾಗಿ ಅಲಂಕೃತಗೊಂಡ ಕಾರಿನಲ್ಲಿ ತನ್ನ ಮದುವೆಯ ಸ್ಥಳಕ್ಕೆ ಬರುವುದನ್ನು ನಾವು ನೋಡಿರುತ್ತೇವೆ. ಇಲ್ಲಿ ತುಂಬಾನೇ ವಿಭಿನ್ನವಾದ ಎಂಟ್ರಿ ಈ ನವ ವಧು ನೀಡಿದ್ದಾರೆ ಎಂದು ಹೇಳಬಹುದು.
ಈ ವಧು ಬರೋಬ್ಬರಿ 250 ಹೀಲಿಯಂ ಬಲೂನ್‌ಗಳನ್ನು ಗಾಳಿಯಲ್ಲಿ ತೇಲಾಡಲು ಬಿಟ್ಟು, ಅದಕ್ಕೆ ಒಂದು ಉಯ್ಯಾಲೆಯಂತೆ ಕಟ್ಟಿ ಅದರ ಮೇಲೆ ರಾಣಿಯಂತೆ ಕುಳಿತುಕೊಂಡು ಹಾಗೆಯೇ ಗಾಳಿಯಲ್ಲಿ ತೇಲುತ್ತಾ ಮದುವೆಗೆ ಎಂಟ್ರಿ ಕೊಟ್ಟಿದ್ದಾಳೆ. ಈ ಗ್ರ್ಯಾಂಡ್ ಎಂಟ್ರಿ ಮದುವೆ ನಡೆದಿದ್ದು ಇಟಲಿಯಲ್ಲಿ.
ವಧುವಿನ ಉಡುಗೆಯೊಂದಿಗೆ ಮ್ಯಾಚಿಂಗ್ ಮಾಡಲು ಕಾಪಾಡಿಕೊಳ್ಳಲು ಬಲೂನುಗಳು ಸಹ ಬಿಳಿ ಬಣ್ಣದಲ್ಲಿವೆ. ವಧು ತನ್ನ ಮದುವೆಯ ಉಡುಗೆಯೊಂದಿಗೆ ವಜ್ರ-ಕೆತ್ತನೆಯ ಟಿಯಾರಾವನ್ನು ಸಹ ಧರಿಸಿದ್ದಾಳೆ. ವೈರಲ್ ವಿಡಿಯೋದಲ್ಲಿ ಅವಳು ಯಾವುದೇ ಅತಿಲೋಕ ಸುಂದರಿಗೂ ಕಡಿಮೆಯಿಲ್ಲದಂತೆ ಕಾಣುತ್ತಾಳೆ.
“ನಿಜ ಜೀವನದ ರಾಜಕುಮಾರಿ ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ ಬಂದಳು. ಆಕೆಯ ಹಿಂದಿನ ಆ ಸುಂದರ ಹಿನ್ನಲೆಯನ್ನು ಸಹ ವಿಡಿಯೋದಲ್ಲಿ ನೋಡಬಹುದು” ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.