ಬ್ಯಾಂಕ್ ಆಫ್ ಬರೋಡಾ : ಗೃಹ ಸಾಲದ ಬಡ್ಡಿ ಇಳಿಕೆ

ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಸೀಮಿತ ಅವಧಿಗೆ ಶೇಕಡ 6.75ರಿಂದ ಶ 6.50ಕ್ಕೆ ಇಳಿಕೆ ಮಾಡಿರುವುದಾಗಿ ಬ್ಯಾಂಕ್ ಆಫ್ ಬರೋಡಾ ಶುಕ್ರವಾರ ತಿಳಿಸಿದೆ.

 

ಈ ಬಡ್ಡಿದರವು ಜೂನ್ 30ರವರೆಗೆ ಮಾತ್ರವೇ ಜಾರಿಯಲ್ಲಿ ಇರಲಿದೆ ಎಂದು ಹೇಳಿದೆ. ‘ಕೆಲವು ತಿಂಗಳುಗಳಿಂದ ಮನೆ ಮಾರಾಟ ನಿರಂತರವಾಗಿ ಹೆಚ್ಚಾಗುತ್ತಿರುವುದನ್ನು
ಗಮನಿಸಿದ್ದೇವೆ.

ಹೀಗಾಗಿ ಸೀಮಿತ ಅವಧಿಯ ಬಡ್ಡಿದರ ನೀಡಲು ಇದು ಸೂಕ್ತ ಸಮಯ, ಸಂಸ್ಕರಣಾ ಶುಲ್ಕವೂ ಇರುವುದಿಲ್ಲ’ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಚ್.ಟಿ. ಸೋಲಂಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ.6.5ರಷ್ಟು ಇದ್ದ ಬಡ್ಡಿದರವನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಶೇ 6.75ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಸೀಮಿತ ಅವಧಿಯ ಕೊಡುಗೆಯಾಗಿ ಶೇ 6.5ಕ್ಕಿ ಇಳಿಕೆ ಮಾಡಲಾಗಿದೆ.

Leave A Reply

Your email address will not be published.