ಬೆಂಗಳೂರಿನಲ್ಲಿ ಪತ್ತೆಯಾಯಿತು ಎರಡು ಹೊಸ ರೂಪಾಂತರಿ ವೈರಸ್ | 3-4 ವಾರದಲ್ಲೇ ರಾಜ್ಯದಲ್ಲಿ ಶುರುವಾಗಲಿದೆ ನಾಲ್ಕನೇ ಅಲೆ

ಇನ್ನೇನು ಕೊರೊನಾ ಸೋಂಕು ಕಡಿಮೆಯಾಗಿದೆ,ಮಾಸ್ಕ್ ಕಡ್ಡಾಯವಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ ಬೆನ್ನಲ್ಲೆ ಇದೀಗ ಮತ್ತೊಂದು ಆಘಾತಕಾರಿ ವಿಷಯ ಹೊರಗೆ ಬಿದ್ದಿದೆ.ಬೆಂಗಳೂರಿನಲ್ಲಿ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

 

BA.2.10 ಹಾಗೂ BA.2. 12 ಗಳು ಕಾಣಿಸಿಕೊಂಡಿದ್ದಾಗಿ ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್​.ಮಂಜುನಾಥ್​ ತಿಳಿಸಿದ್ದಾರೆ. ಬಿಎ.2 ರೂಪಾಂತರಗಳು ದೆಹಲಿ ಮತ್ತು ಮುಂಬೈನಲ್ಲಿ ಕಾಣಿಸಿಕೊಂಡಿದ್ದವು. ಅದೀಗ ಬೆಂಗಳೂರಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಕೊರೊನಾದ ನಾಲ್ಕನೇ ಅಲೆ ಈಗಾಗಲೇ ಶುರುವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಂಜುನಾಥ್​ ಹೇಳಿದ್ದಾರೆ.

ರಾಜ್ಯದಲ್ಲಿ ಇನ್ನು 3-4ವಾರದಲ್ಲಿ ಕೊರೊನಾ 4ನೇ ಅಲೆ ಶುರುವಾಗುವ ಸಾಧ್ಯತೆ ಇದ್ದು,ಈ ಬಾರಿಯ ಅಲೆಗೆ ಬಿಎ 2 ರೂಪಾಂತರಿ ವೈರಸ್​ ಕಾರಣವಾಗಬಹುದು. ಕೊರೊನಾ 3ನೇ ಅಲೆಯಲ್ಲಿ ಸೋಂಕಿತರು ಯಾವೆಲ್ಲ ಲಕ್ಷಣ ಹೊಂದುತ್ತಿದ್ದರೂ, ಅದೇ ಲಕ್ಷಣಗಳು ನಾಲ್ಕನೇ ಅಲೆಯಲ್ಲಿಯೂ ಗೋಚರಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುತ್ತದೆ. ಆದರೆ ಸೋಂಕು ವ್ಯಾಪಕವಾಗಿರುತ್ತದೆ ಎಂದೂ ಡಾ. ಮಂಜುನಾಥ್​ ಹೇಳಿದ್ದಾರೆ.

ಈಗಾಗಲೇ ಎಲ್ಲ ನಿರ್ಬಂಧಗಳನ್ನೂ ತೆಗೆದು, ಚಟುವಟಿಕೆಗಳು ಎಂದಿನಂತೆ ಪ್ರಾರಂಭವಾಗಿವೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ದೈನಂದಿನ ಕೊರೊನಾ ಕೇಸ್​ಗಳಲ್ಲಿ ಏರಿಕೆ ಕಂಡುಬರಲಿದ್ದು,ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಶ್ವಾಸಕೋಶ, ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಅತ್ಯಂತ ಜಾಗರೂಕರಾಗಿ ಇರಬೇಕು. ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ. ಜ್ವರ, ಕೆಮ್ಮು-ಶೀತವನ್ನು ನಿರ್ಲಕ್ಷಿಸಬೇಡಿ. ಕೂಡಲೇ ಕೊವಿಡ್​ 19 ಟೆಸ್ಟ್​ಗೆ ಒಳಗಾಗಿ,ಲಸಿಕೆ ತೆಗೆದುಕೊಂಡಿದ್ದೇವೆ.ಏನಾಗುವುದಿಲ್ಲ ಎಂಬ ನಿರ್ಲಕ್ಷವಂತೂ ಬೇಡವೇ ಬೇಡ ಎಂದಿದ್ದಾರೆ.

Leave A Reply

Your email address will not be published.