ಎರಡು ಗುಪ್ತಾಂಗ ಹೊಂದಿದ ಮಗು ಜನನ ! ನಂತರ ಆದದ್ದು ಏನು ?

ಮನುಷ್ಯ ಎರಡು ಕಣ್ಣು, ಎರಡು ಕಾಲು, ಎರಡು ಕೈ, ಒಂದು ತಲೆ, ಒಂದು ಗುಪ್ತಾಂಗವನ್ನು ಹೊಂದಿರುತ್ತಾನೆ.‌ ಆದರೆ ಇಲ್ಲೊಂದು ಮಗು ಎರಡು ಗುಪ್ತಾಂಗವನ್ನು ಹೊಂದಿದೆ. ಕೈ,ಕಾಲು ಬೆರಳುಗಳು ಒಂದು ಅಧಿಕವಾಗಿ ಇದ್ದರೆ ಅದೃಷ್ಟ ಎನ್ನುತ್ತಾರೆ. ಆದರೆ ಇಲ್ಲೊಂದು ಗಂಡು ಮಗುವಿಗೆ ಗುಪ್ತಾಂಗ ಅಧಿಕವಾಗಿ ಜನಿಸಿದೆ. ಎರಡು ಶಿಶ್ನಗಳೊಂದಿಗೆ ಮಗುವೊಂದು ಜನಿಸಿದೆ!

 

ಪ್ರತಿ ಐದರಿಂದ ಆರು ಮಿಲಿಯನ್ ಗಂಡುಮಕ್ಕಳಲ್ಲಿ ಒಬ್ಬರು ಮಾತ್ರ ಹೆಚ್ಚುವರಿ ಶಿಶ್ನದೊಂದಿಗೆ ಜನಿಸುತ್ತಾರೆ. ಗರ್ಭಾಶಯದಲ್ಲಿ ಜನನಾಂಗಗಳು ಬೆಳವಣಿಗೆಯಾದಾಗ ಇದು ಆಕಸ್ಮಿಕವಾಗಿ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ.

ಡಿಫಾಲಿಯಾ ಎಂಬುದು ಜನನದ ಸಮಯದಲ್ಲಿ ಇರುವ ಒಂದು ಆನುವಂಶಿಕ ಸ್ಥಿತಿಯಾಗಿದ್ದು, ಇದರಲ್ಲಿ ಮಗು ಎರಡು ಶಿಶ್ನಗಳನ್ನು ಹೊಂದಿರುತ್ತದೆ. ಈ ಅಪರೂಪದ ಸ್ಥಿತಿಯನ್ನು ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೆಕರ್ ಅವರು 1609 ರಲ್ಲಿ ತಮ್ಮ ವರದಿಯಲ್ಲಿ ಬರೆದಿದ್ದಾರೆ.

ಎರಡು ಶಿಶ್ನಗಳೊಂದಿಗೆ ಬ್ರೆಜಿಲಿಯನ್  ನಲ್ಲಿ ಗಂಡು ಮಗುವೊಂದು ಜನಿಸಿದೆ. ಮಗು ಎರಡು ವರ್ಷವಾದ ನಂತರ ಬಲ ಶಿಶ್ನ ಅವಶ್ಯಕ ಎಂದು ಎಡ ಶಿಶ್ನವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.
ಶಸ್ತ್ರಚಿಕಿತ್ಸೆಯು ಯಾವುದೇ ತೊಂದರೆಯಿಲ್ಲದೆ ಪೂರ್ಣಗೊಂಡಿತು, ಶಸ್ತ್ರಚಿಕಿತ್ಸಕರು ದೊಡ್ಡ ಶಿಶ್ನವನ್ನು ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಾಯಿತು.

Leave A Reply

Your email address will not be published.