ಆರ್ ಟಿ ಐ ಕಾರ್ಯಕರ್ತನ ಕೊಲೆಗೆ ಯತ್ನ ! ರಾತ್ರಿ ಎರಡು ಬಾರಿ ಕೊಲೆಯತ್ನ, ಮೂರನೇ ಬಾರಿಗೆ ಪೊಲೀಸರಿಂದ ರಕ್ಷಣೆ!!!

ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಎಂಬುವವರ ಮೇಲೆ ದುಷ್ಕರ್ಮಿಗಳ ಗ್ಯಾಂಗೊಂದು ಹಲ್ಲೆ ನಡೆಸಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಬಚಾವಾಗಿದ್ದಾರೆ.

ದುಷ್ಕರ್ಮಿಗಳ ಗ್ಯಾಂಗ್ ಹೆಚ್.ಎಂ.ವೆಂಕಟೇಶ್ ಮೇಲೆ 3 ಬಾರಿ ಹಲ್ಲೆಗೆ ಯತ್ನಿಸಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೊದಲ ಬಾರಿಗೆ ಹೆಬ್ಬಾಳ ಫೈಓವರ್ನಲ್ಲಿ ಹಲ್ಲೆಗೆ ಯತ್ನಿಸಿದ್ದ ಗ್ಯಾಂಗ್ ನಂತರ ಕಾರು ಹಿಂಬಾಲಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದಾರೆ. 3ನೇ ಬಾರಿಗೆ ನ್ಯಾಯಾಂಗ ಬಡಾವಣೆ ಬಳಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ.


Ad Widget

Ad Widget

Ad Widget

ಈ ವೇಳೆ ಅಲ್ಲೇ ಇದ್ದ ಯಲಹಂಕ ಠಾಣೆ ಇನ್ಸಪೆಕ್ಟರ್ ವೆಂಕಟೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ವೇಳೆ ಅದೇ ರಸ್ತೆಯಲ್ಲೇ ತೆರಳುತ್ತಿದ್ದ ಯಲಹಂಕ ಇನ್ಸ್ ಪೆಕ್ಟರ್ ಸತ್ಯನಾರಾಯಣ್, ಹೆಚ್.ಎಂ.ವೆಂಕಟೇಶ್ ಕಾರು ಅಡ್ಡಗಟ್ಟಿದ್ದನ್ನು ಗಮನಿಸಿದ್ದರು. ಬಳಿಕ ಪಿಐ ಸತ್ಯನಾರಾಯಣ ತಮ್ಮ ಪೊಲೀಸ್ ಜೀಪಿನಿಂದ ಇಳಿದು ಓಡಿ ಹೋಗಿ ವೆಂಕಟೇಶ್ ಅವರನ್ನು ರಕ್ಷಿಸಿದ್ದಾರೆ.

ಈ ಹಿಂದೆ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಆರ್ಟಿಐ ಮೂಲಕ ವೆಂಕಟೇಶ್ ಬಯಲಿಗೆಳೆದಿದ್ದರು. ಇದೇ ಕಾರಣಕ್ಕೆ ದುಷ್ಕರ್ಮಿಗಳ ಗ್ಯಾಂಗ್ ಹಿಂಬಾಲಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದರು. ಪಿಐ ಸತ್ಯನಾರಾಯಣ ಸಮಯಪ್ರಜ್ಞೆಯಿಂದ ವೆಂಕಟೇಶ್ ಬಚಾವ್ ಆಗಿದ್ದಾರೆ. ಈ ಬಗ್ಗೆ ಆರ್ಟಿಐ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಅವರಿಂದ ಕೇಸ್ ದಾಖಲಾಗಿದ್ದು ಘಟನೆ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: