ಲವ್ ಜಿಹಾದ್ ಆರೋಪ | ಅನ್ಯಕೋಮಿನ ಯುವಕನಿಂದ ಶಿಕ್ಷಕಿಯ ಅಪಹರಣ| ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ!

Share the Article

24 ವರ್ಷದ ಅತಿಥಿ ಶಿಕ್ಷಕಿಯೋರ್ವಳನ್ನು ಅನ್ಯಧರ್ಮದ ಯುವಕನೋರ್ವ ಅಪಹರಣ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಹಾವೇರಿಯಲ್ಲಿ ನಡೆದಿದೆ.

ಶಿಕ್ಷಕಿ ಸವಣೂರು ತಾಲೂಕಿನ ಕಡಕೋಳ ಗ್ರಾಮದ ಯುವತಿ ಎಂದು ತಿಳಿದುಬಂದಿದೆ. ಗದಗ ಜಿಲ್ಲೆ ಲಕ್ಷೇಶ್ವರ ಪಟ್ಟಣದ ಭಾಷಾ ರತನಖಾನ ಎಂಬ ಯುವಕನಿಂದ ಅಪಹರಣ ನಡೆದಿದೆ ಎನ್ನಲಾಗಿದೆ.

ಏಪ್ರಿಲ್ 13ರಂದು ಅತಿಥಿ ಶಿಕ್ಷಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿದ್ದಾನೆಂದು ಪ್ರತಿಭಟನೆ ನಡೆದಿದೆ.

ಯುವತಿಯ ಚಿಕ್ಕಪ್ಪ ಏಪ್ರಿಲ್ 13ರಂದೇ ಪ್ರಕರಣ ದಾಖಲಿಸಿದ್ದಾರೆ. ಆದರೂ ಕೇಸ್ ದಾಖಲಿಸಿ 10 ದಿನಗಳಾದರೂ ಭಾಷಾ ರತನಖಾನ್ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲವೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಯುವತಿಯನ್ನು ಪತ್ತೆ ಹಚ್ಚದ ಸವಣೂರು ಠಾಣೆ ಪೊಲೀಸರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ
ಮನವಿ ಸಲ್ಲಿಸಿದ್ದಾರೆ. ಹಿಂದೂ ಯುವತಿಯನ್ನ ಅಪಹರಿಸಿ, ಲವ್ ಜಿಹಾದ್ ಮಾಡಿದ್ದಾರೆ ಅಂತಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.