SSLC ವಿದ್ಯಾರ್ಥಿಗಳಿಂದ ಗುಂಡು ತುಂಡಿನ ವಿದಾಯ ಪಾರ್ಟಿ ; ಫೋಟೋ ವೈರಲ್, ತನಿಖೆ ಆರಂಭ

ಎಸ್ ಎಸ್ ಎಲ್ ಸಿ ವಿದಾಯ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಗುಂಡು ತುಂಡಿನ ಪಾರ್ಟಿ ಮಾಡಿರುವ ಘಟನೆಯೊಂದು ನಡೆದಿದೆ.

 

ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕುಡಿತದ ಚಿತ್ರ ವೈರಲ್ ಆಗಿವೆ. ದಾಂಡೇಪಲ್ಲಿಯಲ್ಲಿರುವ ಬಾಲಕರ ವಸತಿ ಶಾಲೆಯಲ್ಲಿ ಈ ಘಟನೆ ವರದಿಯಾಗಿದ್ದು, ವಿದಾಯದ ಪಾರ್ಟಿಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳು ಬಿಯರ್ ಸೇವಿಸುತ್ತಿರುವ ಫೋಟೋ ತೆಗೆಸಿಕೊಂಡಿದ್ದು, ಇದೀಗ ಅದು ವೈರಲ್ ಆಗಿದೆ.

ಅಭಿವೃದ್ಧಿ ಅಧಿಕಾರಿ ಭಗವತಿ ಅವರ ಪ್ರಕಾರ, ‘ವಿದ್ಯಾರ್ಥಿಗಳು ತಮ್ಮ ಬೇಸಿಗೆ ರಜೆ ಪ್ರಾರಂಭವಾಗುವ ಮೊದಲು ಬೀಳ್ಕೊಡುಗೆ ಸಮಾರಂಭವನ್ನು ನಡೆಸಲು ಹಾಸ್ಟೆಲ್ ವಾರ್ಡನ್ ಅವರಿಂದ ಅನುಮತಿ ಕೋರಿದ್ದಾಗಿ ತಿಳಿದು ಬಂದಿದೆ. ಆದರೆ, ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮದ್ಯ ಸೇವಿಸಿದ್ದರು’ ಎಂದು ಆರೋಪಿಸಿದರು.

ಏಪ್ರಿಲ್ 17 ರಂದು ಈ ಪಾರ್ಟಿ ನಡೆದಿದ್ದು ಹಾಗೂ ಗ್ರಾಮದಲ್ಲಿ ವಾಸಿಸುತ್ತಿದ್ದ ಅವರ ಸ್ನೇಹಿತರು ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಿಗೆ ಹೊರಗಿನಿಂದ ಮದ್ಯವನ್ನು ಸರಬರಾಜು ಮಾಡಿದ್ದಾರೆ.

ಈ ಪಾರ್ಟಿಯ ಫೋಟೋಗಳನ್ನು ಕೆಲವು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ

Leave A Reply

Your email address will not be published.