ಮುದ್ದಾದ ಬೆಕ್ಕು ತಯಾರಿಸಿತು ಮಣ್ಣಿನ ಮಡಿಕೆ!!

ಪ್ರಾಣಿಗಳಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಮನುಷ್ಯರಿಗೆ ಅತ್ಯಂತ ಪ್ರಿಯವಾಗಿವೆ. ಒಂದೆಡೆ, ನಾಯಿ ನಿಷ್ಠಾವಂತ ಪ್ರಾಣಿಯಾಗಿದ್ದರೆ, ಇನ್ನೊಂದೆಡೆ ಬೆಕ್ಕು ಜನರಿಗೆ ತುಂಬಾ ಮುದ್ದಿನ ಪ್ರಾಣಿಯಾಗಿದೆ. ಮನೆಯಲ್ಲಿ ಇಲಿಗಳ ಕಾಟ ತಪ್ಪಿಸಲು ಜನರು ಬೆಕ್ಕುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಒಂದು ರೀತಿಯಲ್ಲಿ ಬೆಕ್ಕು ಕೂಡ ಮನುಷ್ಯರ ಸ್ನೇಹಿತ ಪ್ರಾಣಿ ಎಂದರೆ ತಪ್ಪಾಗಲಾರದು.

ಅಂತೆಯೇ ಇಲ್ಲೊಂದು ಮನೆಯಲ್ಲಿ ಸಾಕಿದ ಬೆಕ್ಕು ಮಣ್ಣಿನ ಮಡಕೆಯನ್ನು ತಯಾರಿಸಬೇಕೇ ?! ಇದನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರಿ. ಇತ್ತೀಚಿನ ದಿನಗಳಲ್ಲಿ ಇಂತಹ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.


Ad Widget

Ad Widget

Ad Widget

ಈ ವೀಡಿಯೋದಲ್ಲಿ ಬೆಕ್ಕು ಮಣ್ಣಿನ ಮಡಕೆಗಳನ್ನು ತಯಾರಿಸುತ್ತಿರುವುದನ್ನು ನೀವು ನೋಡಬಹುದು. ಒಬ್ಬ ವ್ಯಕ್ತಿ ಒದ್ದೆಯಾದ ಜೇಡಿಮಣ್ಣನ್ನು ತಟ್ಟಿ ಮಡಕೆಯನ್ನು ಹೇಗೆ ತಯಾರಿಸುತ್ತಾನೋ ಅದೇ ರೀತಿಯಲ್ಲಿ ಈ ಬೆಕ್ಕು ಮಡಿಕೆ ತಯಾರಿಸುವುದನ್ನು ನೀವು ನೋಡಬಹುದು. ಇದು ನಿಜಕ್ಕೂ ಶಾಕಿಂಗ್ ವೀಡಿಯೋ ಆಗಿದೆ. ಬೆಕ್ಕಿನ ಮಣ್ಣಿನ ಪಾತ್ರೆಗಳನ್ನು ನೋಡಿ ನೆಟ್ಟಿಗರು ಕೂಡ ಆಶ್ಚರ್ಯಚಕಿತರಾಗಿದ್ದಾರೆ.

Buitengebieden ಹೆಸರಿನ ಟ್ವಿಟ್ಟರ್ ಖಾತೆ ಮೂಲಕ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ಮೋಜಿನ ಮತ್ತು ಮುದ್ದಾದ ವೀಡಿಯೊಗಳನ್ನು ಈ ಖಾತೆಯಿಂದ ಹಂಚಿಕೊಳ್ಳಲಾಗುತ್ತದೆ. ವ್ಯಕ್ತಿಯೊಬ್ಬ ಮಣ್ಣಿನ ಮಡಕೆ ಮಾಡುತ್ತಿರುವುದು ವೀಡಿಯೋದಲ್ಲಿ  ನೀವು ನೋಡಬಹುದು. ಇದೇ ವೇಳೆ ಬೆಕ್ಕು ಮಣ್ಣಿನ ಮಡಕೆ ಮಾಡುವ ವ್ಯಕ್ತಿಯನ್ನು ಬೆಕ್ಕು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದೆ. ನಂತರ ಬೆಕ್ಕಿನ ಪ್ರತಿಕ್ರಿಯೆ ನೋಡಿ ಜನರು ಭಾರಿ  ಅಚ್ಚರಿಗೊಂಡಿದ್ದಾರೆ.

ಆ ವ್ಯಕ್ತಿ ಮಡಿಕೆ ತಯಾರಿಸಿದ ನಂತರ ಬೆಕ್ಕು ಸಾಂದರ್ಭಿಕವಾಗಿ ತನ್ನ ಪಂಜಗಳಿಂದ ಮಣ್ಣಿನ ಮಡಕೆಯನ್ನು ತತ್ತುವುದನ್ನು ಸಹ ಈ ವೀಡಿಯೋದಲ್ಲಿ ಕಾಣಬಹುದು. ಬೆಕ್ಕು ತುಂಬಾ ನಿಧಾನವಾಗಿ ಮಡಕೆಯನ್ನು ಸ್ಪರ್ಶಿಸುತ್ತಿರುವುದು ಕಂಡುಬರುತ್ತದೆ. ಈ ಬೆಕ್ಕಿಗೆ ಮಿನಿ ಇಂಜಿನಿಯರ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸುಂದರವಾದ ಮಡಿಕೆ ತಯಾರಿಸಿದ ಈ ಇಂಜಿನಿಯರ್ ಗೊಂದು ಸಲಾಂ ಹೇಳಲೇಬೇಕಲ್ಲವೇ.

Leave a Reply

error: Content is protected !!
Scroll to Top
%d bloggers like this: