ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ : ಹಿಜಾಬ್ ಬೇಕೆಂದು ಹೋರಾಟ ಮಾಡಿದ ನಾಲ್ವರು ವಿದ್ಯಾರ್ಥಿಗಳು ಹಾಲ್ ಟಿಕೇಟ್ ಪಡೆದಿಲ್ಲ

ಕರ್ನಾಟಕ ಹೈಕೋರ್ಟ್ ಆದೇಶ ದಂತೆ ಪರೀಕ್ಷೆ ಬರೆಯಲು ಶಾಲಾ ಸಮವಸ್ತ್ರ ಹೊರತು ಪಡಿಸಿ ಯಾವುದೇ ಇತರ ವಸ್ತ್ರ ಧರಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ನಾಳೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಸೃಷ್ಟಿಗೆ ಕಾರಣರಾದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರಾ ಎಂದು ಕಾದು‌ನೋಡಬೇಕಿದೆ.

ಯಾಕೆಂದರೆ ಆ 4 ಮಂದಿ ವಿದ್ಯಾರ್ಥಿನಿಯರು ಇದುವರೆಗೂ ಅವರು ಹಾಲ್​ ಟಿಕೆಟ್​ ತೆಗೆದುಕೊಂಡಿಲ್ಲ.

ಹಿಜಾಬ್ ಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಆ ಆರು ವಿದ್ಯಾರ್ಥಿ ಹೋರಾಟಗಾರ್ತಿಯರು ಪರೀಕ್ಷೆ ಬರೀತಾರಾ? ಅವರ ಭವಿಷ್ಯವೇನು? ಎಂಬುದು ಆ ಮಕ್ಕಳ ಶಿಕ್ಷಣ ಭವಿಷ್ಯದ ಪ್ರಶ್ನೆಯಾಗಿದೆ.

ಗಮನಾರ್ಹವೆಂದರೆ ಆ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು. ಹಾಗಾಗಿ ಉಳಿದ ನಾಲ್ವರು ನಾಳೆಯಿಂದ ಏನು ಮಾಡುತ್ತಾರೆ ಎಂಬುದೇ ಪ್ರಶ್ನೆ. ಕುತೂಹಲಕಾರಿ ಸಂಗತಿಯೆಂದರೆ ಆ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಅಂತಿಮ ಪರೀಕ್ಷೆ ಬರೆಯಲಿಲ್ಲ! ಉಳಿದ ನಾಲ್ವರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಹ ಪಡೆದುಕೊಂಡಿಲ್ಲ.

ಪರೀಕ್ಷೆ ಬರೆಯುವ ತಯಾರಿ ನಡೆಸಿರುವ ಆ ನಾಲ್ಕೂ ಹಿಜಾಬ್ ವಿದ್ಯಾರ್ಥಿನಿಯರು ‘ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.