ಕರಿಯಕಲ್ಲುವಿನಲ್ಲೊಂದು ಕಾಮಿಡಿ ಪ್ರಸಂಗ-ಗೋ ಕಳ್ಳತನ ಪ್ರಕರಣಕ್ಕೆ ತಿರುವು!! |
ಕಾರ್ಕಳದ ಮಹಿಳೆಯೊಬ್ಬರ ಮನೆಗೆ ಡಕಾಯಿತರು ನುಗ್ಗಿದ್ದಾರೆ. ಮನೆಯಲ್ಲಿ ಮಗುವಿನ ಥರ ಸಾಕಿದ್ದ, ಜೀವನೋಪಾಯದ ಒಂದು ಉದ್ಯೋಗವನ್ನೇ ಕಸಿದುಕೊಂಡು ಹೋಗಿದ್ದಾರೆ ಕಟುಕರು. ಕೇವಲ 3 ತಿಂಗಳು ಪ್ರಾಯದ ಕರು ಇರುವ ಹಸುವಿನ ಕಳ್ಳತನ ಆಗಿತ್ತು. ಅದರ ಜತೆಗೆ ಮನೆಯ ಕೋಳಿ ಗೂಡಿನಿಂದ 5 ಕೋಳಿ ಮತ್ತು 2 ನಾಯಿಮರಿಗಳನ್ನು ಕೂಡಾ ಎತ್ತಿಕೊಂಡು ಹೋಗಿದ್ದರು. ಇದೀಗ ಕೇಸು ಟ್ವಿಸ್ಟ್ ಪಡಕೊಂಡು ದನ ವಾಪಸ್ ಬಂದಿದೆ !!
ಮೇಯಲು ಹೋದ ದನ ವಾಪಸ್ ಬಂದಿದೆ. ಈಗ, ಅಸಲಿಗೆ ದನ ಮನೆಗೆ ಬಂದೇ ಇರಲಿಲ್ಲ ಎಂಬ ಕತೆ ಕಟ್ಟುತ್ತಿದ್ದಾರೆ. ಓಕೇ ಸಾರ್, ದನ ಸಂಜೆ ಕಟ್ಟಿ ಹಾಕಿದ ಹಗ್ಗ ಕಡಿದುಕೊಂಡು ಮೇಯಲು ಹೋಯ್ತು. ಒಪ್ಕೊಲ್ಲೋಣ, ಮನೆಯ ಹೆಂಟೆಗಳು ಕೂಡಾ ದನದ ಸಂಗಡ ಫ್ರೆಂಡ್ ಶಿಪ್ ಮಾಡಿಕೊಂಡು ಕಾಡು ಮೇಯಲು ಹೋದವಾ ? ಅಷ್ಟೇ ಅಲ್ಲದೆ, ಹಾಗೆ ದನ ಮತ್ತು ಹೆಂಟೆಗಳು ಮೇಯಲು ಹೋದಾಗ ಸೆಕ್ಯೂರಿಟಿಗೆ ಇರಲಿ ಅಂತ ನಾಯಿ ಮರಿಗಳನ್ನು ಕರೆದವಾ ?! ಇವೆಲ್ಲಾ ಸೇರಿ ರಾತ್ರಿಯ ಹೊತ್ತಲ್ಲೇ ನೈಟ್ ಡ್ಯೂಟಿಗೆ ಹೊರಟವಾ ?! ಕೆಲವರು ಕೊಡುತ್ತಿರುವ ಸಮಾಜಾಯಿಷಿ ತಮಾಷೆಯಾಗಿದೆ.
ಘಟನೆ ತೀವ್ರತೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕಳ್ಳರು ಹೆದರಿ ದನವನ್ನು ವಾಪಸ್ ಬಿಟ್ಟು ಹೋದ ಸಂಶಯ ವ್ಯಕ್ತವಾಗಿದೆ.
ಘಟನೆಯ ಪೂರ್ತಿ ವಿವರ
ಕಾರ್ಕಳದ ಕರಿಯಕಲ್ಲು ಸಮೀಪದ ಮೋಹಿನಿ ಮೂಲ್ಯ ಎಂಬವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮುಂಜಾನೆ ಎರಡು ಗಂಟೆಯ ಸುಮಾರಿಗೆ ಕರಿಯಕಲ್ಲಿನ ಅತೀ ಕುಗ್ರಾಮ ಪ್ರದೇಶವಾದ ಪಡ್ಡಾಯಿಬೆಟ್ಟು ಎಂಬಲ್ಲಿನ ಮನೆಯೊಂದರಿಂದ ಸುಮಾರು 25,000 ರುಪಾಯಿ ಬೆಲೆ ಬಾಳುವ ಹಾಲು ಕರೆಯುವ ಹಸುವನ್ನು ಮತ್ತು ಸುಮಾರು 12,000 ಬೆಲೆ ಬಾಳುವ 3-4ಹುಂಜಾ 2-3 ಹೇಂಟೆಗಳ ಕಳವು ಮಾಡಲಾಗಿತ್ತು.
ನಿನ್ನೆ ಮತ್ತೆ ಈ ಕಳವನ್ನು ಮನೆ ಮನೆಗೆ ಗುಜುರಿ ಹೆಕ್ಕಲು ಬರುವವರು ಮಾಡಿರಬಹುದು ಎಂಬ ಸಂಶಯವನ್ನು ಹಿಂದು ಮತ್ತು ದನದ ಮಾಲೀಕರು ವ್ಯಕ್ತಪಡಿಸಿದ್ದರು.
ಈ ಘಟನೆ ಬಿಸಿ ಬಿಸಿಯಾಗಿರುವಾಗಲೇ ಮೂಡುಬಿದಿರೆಯ ಗಂಟಾಲ್ಕಟ್ಟೆಯ ಅನ್ಯಮತೀಯನೊಬ್ಬ ಬೀಗ ಹಾಕಿರುವ ದನ-ಕರುಗಳಿರುವ ಮನೆಯಂಗಳದಲ್ಲಿ ಕಳ್ಳನಂತೆ ಸುತ್ತಾಡುತ್ತಿರುವುದನ್ನು ಕಾರ್ಕಳ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪತ್ತೆಹಚ್ಚಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ.
ಗುಜುರಿ ವ್ಯಾಪಾರದ ಹೆಸರಲ್ಲಿ ಮನೆ ಮನೆಗೆ ತೆರಳುವ ಗೋ ದಲ್ಲಾಳಿಗಳು ಬರ್ತಾರೆ ಹುಷಾರ್ !!
ಅತ್ಯಂತ ಹಿಂದುಳಿದ ಕುಗ್ರಾಮ ಪ್ರದೇಶಗಳಿಗೆ ಗುಜುರಿ ಮಾತ್ರವಲ್ಲದೆ ಹಾಸಿಗೆ, ಚಾಪೆ, ಮಿಕ್ಸರ್ ಗ್ರೈಂಡರ್, ಮೀನು ಮಾರಾಟ ಮಾಡಲು ಬರುವ ಅನ್ಯಮತೀಯರ ನಡೆ ಯಾವತ್ತೂ ಸಂಶಯಾಸ್ಪದವಾಗಿಯೇ ಇರುತ್ತದೆ. ಇಂಥವರಿಂದಲೇ ತನ್ನ ಹಸು ಕಳ್ಳತನ ಆಗಿದೆ ಎಂದು ಹಸು ಕಳೆದುಕೊಂಡು ಕಂಗಾಲಾಗಿರುವ ಮೋಹಿನಿ ಮೂಲ್ಯ ಅವರು ಅತ್ತುಕೊಂಡು ದೂರಿದ್ದಾರೆ.
ಮನೆಗೇ ನುಗ್ಗಿ, ಜೀವನೋಪಾಯದ ಉದ್ಯೋಗ ಕಸಿಯುತ್ತಿರುವ, ಹಿಂದೂಗಳ ದೈವ ಸ್ವರೂಪಿ ನಂಬಿಕೆಯ ಹಸುವಿನ ಕೊರಳಿಗೇ ಕೈ ಹಾಕುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಗೋ ಹತ್ಯಾ ನಿಷೇಧ ಕಾಯ್ದೆ ಗೋವಿನಷ್ಟೆ ಸಾಧು ಆಗಿದ್ದು, ಅದರಿಂದ ಹೆಚ್ಚಿನ ಪ್ರಯೋಜನ ಇಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.