ಡಿಪ್ಲೊಮಾ ಪರೀಕ್ಷೆ: ಕನ್ನಡ, ಇಂಗ್ಲೀಷ್ ಎರಡೂ ಭಾಷೆಯಲ್ಲಿ ಉತ್ತರ ಬರೆಯಲು ಅವಕಾಶ

Share the Article

ಬೆಂಗಳೂರು: ಡಿಪ್ಲೊಮಾ ಕೋರ್ಸ್ ಕಲಿಯುತ್ತಿರುವ
ವಿದ್ಯಾರ್ಥಿಗಳೇ ನಿಮಗಾಗಿ ಈ ಸುದ್ದಿ. ಈ ಶೈಕ್ಷಣಿಕ ಸಾಲಿನಿಂದ ಪರೀಕ್ಷೆಯನ್ನು ಬರೆಯಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯು ಕನ್ನಡ ಮತ್ತು ಇಂಗ್ಲಿಷ್ ಬಳಸಿ ಉತ್ತರ ಬರೆಯಲು ಅವಕಾಶ ನೀಡಿದೆ. ಅಂದರೆ, ವಿದ್ಯಾರ್ಥಿಗಳು ಎರಡೂ ಭಾಷೆಗಳನ್ನು ‘ಮಿಶ್ರಣ’ ಮಾಡಿ ಉತ್ತರ ಬರೆಯಬಹುದು.

‘ಡಿಪ್ಲೊಮಾ ಕೋರ್ಸ್ ಸೇರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಎಸ್ಸೆಸ್ಸೆಲ್ಸಿ ಪಾಸಾದವರು. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥ ಮಾಡಿಕೊಡಲು ಶಿಕ್ಷಕರು ಕನ್ನಡದಲ್ಲಿ ಪಾಠ ಮಾಡುತ್ತಾರೆ. ಬಹುತೇಕ ಕೋರ್ಸ್‌ಗಳಲ್ಲಿ ತಾಂತ್ರಿಕ ವಿಷಯಗಳಿರುತ್ತವೆ. ಇಲ್ಲಿ ಸಂವಹನಕ್ಕೆ ಮಾತ್ರ ಇಂಗ್ಲಿಷ್ ಬೇಕಾಗಿದೆ. ಹೀಗಾಗಿ, ಪರೀಕ್ಷೆಯಲ್ಲಿ ಎರಡೂ ಭಾಷೆಗಳ ಮಿಶ್ರಣ ಮಾಡಿ ಉತ್ತರ ಬರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.

Leave A Reply

Your email address will not be published.