ಹಸೆಮಣೆ ಏರುವ ಮೊದಲೇ ಜೈಲು ಸೇರಿದ ಅಬಕಾರಿ ಉಪ ನಿರೀಕ್ಷಕಿ ; ಲಂಚ ಪ್ರಕರಣದಲ್ಲಿ ಅಂದರ್

Share the Article

ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ಅಧಿಕಾರಿ, ಅನಂತರ ದ್ವಿಚಕ್ರ ವಾಹನವನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ.ಲಂಚ ಸ್ವೀಕರಿಸಿ ಜೈಲು ಸೇರಿದ ಘಟನೆಯೊಂದು ನಡೆದಿದೆ.

ಅವಿವಾಹಿತ ಅಬಕಾರಿ ಉಪ ನಿರೀಕ್ಷಕಿ ಕು.ಪ್ರೀತಿ ರಾಥೋಡ್ ಎಂಬುವವರೇ ಜೈಲು ಸೇರಿದ ಅಧಿಕಾರಿ. ಕೋಡಿಭಾಗದ ನಿವಾಸಿಯೊಬ್ಬರ ಮೇಲೆ ಅಕ್ರಮ ಮದ್ಯ ಸಾಗಣೆ ಮಾರಾಟ ಮಾಡಿದ ಆರೋಪವಿದ್ದಿದ್ದರಿಂದ ಆರೋಪಿಯ ಬೈಕ್ ನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಂಕೋಲ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಈ ಪ್ರಕರಣದಲ್ಲಿ ದಾಖಲಾಗಿತ್ತು.

ಕುಮಾರಿ ಪ್ರೀತಿ ರಾಥೋಡ್ ಜಪ್ತಿಯಾಗಿದ್ದ ಬೈಕ್ ನ್ನು ಪ್ರಕರಣದಿಂದ ಕೈ ಬಿಡಲು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಕೊನೆಗೆ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಉತ್ತರ ಕನ್ನಡ ಎಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗೆ ರವಾನಿಸಿದ್ದಾರೆ

Leave A Reply