ಆಲಿಯಾ- ರಣಬೀರ್ ಜೋಡಿಗೆ ಮದುವೆಯಲ್ಲಿ ದೊರೆತ ವಿಚಿತ್ರ ಅಪರೂಪದ ಉಡುಗೊರೆ ಇದು!

Share the Article

ಮದುವೆಯಲ್ಲಿ ಜೋಡಿ ಗಳಿಗೆ ಹಲವಾರು ಗಿಫ್ಟ್ ಗಳು ಬರುತ್ತವೆ. ವಿಚಿತ್ರ ಗಿಫ್ಟ್ ಗಳು ಟ್ರೋಲ್ ಕೂಡ ಆಗಿರುತ್ತವೆ. ಕೆಲವರು ಆಮಂತ್ರಣ ಪತ್ರಿಕೆಯ ಮೇಲೆ ಆಶೀರ್ವಾದವೇ ಉಡುಗೊರೆ ಎಂದು ಬರೆಸಿರುತ್ತಾರೆ. ಇನ್ನು ಕೆಲವರಿಗೆ ಉಡುಗೊರೆಯ ಬಗ್ಗೆ ಕುತೂಹಲವಿರುತ್ತದೆ. ಸಿನಿಮಾ ನಟ ನಟಿಯರಿಗಂತೂ ದುಬಾರಿಯ ಭರ್ಜರಿ ಗಿಫ್ಟ್ ಗಳು ಬಂದಿರುತ್ತವೆ. ನವ ಜೊಡಿಯಾದ ಆಲಿಯಾ ಮತ್ತು ರಣಬೀರ್ ಜೋಡಿಗೆ ಬಂದ ಜೊಡಿಉಡುಗೊರೆ ಏನು ಗೊತ್ತೆ ?

ನವಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ಜೋಡಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಬಂದ ವಿಶೇಷ ಗಿಫ್ಟ್ ಗಳಲ್ಲಿ ಈಗ ಗಂಡು ಕುದುರೆ ಮತ್ತು ಹೆಣ್ಣು ಕುದುರೆಯ ಜೋಡಿಯೂ ಒಂದು! ಇವೆರಡಕ್ಕೂ ಬಾಲಿವುಡ್‌ನ‌ ನವಜೋಡಿಯ ಹೆಸರನ್ನೇ ಇಟ್ಟು, ಉಡುಗೊರೆಯಾಗಿ ನೀಡಲಾಗಿದೆ.

“ಆಲಿಯಾ ಮತ್ತು ರಣಬೀರ್‌ ಇಬ್ಬರೂ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕಾರಣ ಈ ವಿಶೇಷ ಉಡುಗೊರೆ ನೀಡಲಾಗಿದೆ’ ಎಂದು ಎನ್‌ಜಿಒ ಹೇಳಿಕೊಂಡಿದೆ. ವಿವಾಹದ ಸಂದರ್ಭದಲ್ಲಿಯೇ ಮುಂಬೈನ ಅನಿಮಲ್‌ ರಾಹತ್‌ ಎಂಬ ಎನ್‌ಜಿಒ, ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿದ್ದ 2 ಕುದುರೆಗಳನ್ನು ಸಂರಕ್ಷಣೆ ಮಾಡಿದ್ದರು. ಆ ಕುದುರೆಗಳನ್ನೇ ಅನಿಮಲ್‌ ರಾಹತ್‌ ಎಂಬ ಎನ್‌ಜಿಒ ನವಜೊಡಿಗೆ ಉಡುಗೊರೆಯಾಗಿ ನೀಡಿದೆ.

Leave A Reply