ಉಡುಪಿ : ಹಾಡಹಗಲೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಬಸ್ಸಿಗಾಗಿ ಕಾಯುತ್ತಾ ನಿಂತ ವಿದ್ಯಾರ್ಥಿನಿ ಮೇಲೆ ಮುಗಿಬಿದ್ದ ಕಾಮುಕ!

ಉಡುಪಿ; ಕಾಲೇಜು ಮುಗಿದ ನಂತರ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ಯುವತಿಯ ಮೇಲೆ ಕಾಮುಕನೋರ್ವ ಹಾಡಹಗಲೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ನಗರದ ಪುರಭವನ ಬಳಿ ನಡೆದಿದೆ.

ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಕಾಮುಕನೋರ್ವ ವಿದ್ಯಾರ್ಥಿನಿ ಮೇಲೆ ಮುಗಿಬಿದ್ದಿದ್ದಾನೆ. ತಕ್ಷಣ ಬೆಚ್ಚಿದ ವಿದ್ಯಾರ್ಥಿನಿ ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದಾಳೆ. ಈ ವೇಳೆ ಪಕ್ಕದಲ್ಲಿದ್ದ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದಾರೆ. ಮಾತ್ರವಲ್ಲ, ಕಾಮುಕನಿಗೆ ಚೆನ್ನಾಗಿ ಬಾರಿಸಿದ್ದಾರೆ. ಬಳಿಕ ಕಾಮುಕನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ನೀಲ್ ಗಾಮಾ ಎಂಬ ಯುವಕನಿಂದ ಈ ದುಷ್ಕೃತ್ಯ ನಡೆದಿದ್ದು ,ಈತನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: