ವಿಷಕಾರಿ ಹಾವು ಮತ್ತು ಜಾಣ ಮೊಲದ ನಡುವೆ ನಡೆಯಿತು ಭೀಕರ ಕಾದಾಟ !! | ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದನ್ನು ನಿರೂಪಿಸಿಯೇ ಬಿಟ್ಟಿತು ಮೊಲ | ಈ ರೋಚಕ ಗುದ್ದಾಟದ ವೀಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕಾದಾಟದ ಹಲವು ವೀಡಿಯೋಗಳು ಪ್ರತಿದಿನ ವೈರಲ್ ಆಗುತ್ತಿರುತ್ತವೆ. ಅಂತೆಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳ ಕಾದಾಟದ ಅದೆಷ್ಟೋ ವೀಡಿಯೋಗಳು ಕಾಣಸಿಗುತ್ತವೆ. ಆದರೆ ಮೊಲ ಮತ್ತು ಹಾವಿನ ಕಾದಾಟದ ವೀಡಿಯೋ ನೀವು ಎಂದಾದರೂ ನೋಡಿದ್ದೀರಾ? ಅಂತಹ ಒಂದು ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

 

ಚಿಕ್ಕ ಮೊಲವೊಂದು ಗದ್ದೆಯಲ್ಲಿ ಅಪಾಯಕಾರಿ ಹಾವಿನೊಂದಿಗೆ ಕಾದಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಕಳೆದ ಕೆಲವು ದಿನಗಳಿಂದ ಈ ವೀಡಿಯೋ ವೈರಲ್ ಆಗುತ್ತಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಚಿಕ್ಕ ಮೊಲವು ವಿಷಕಾರಿ ಹಾವಿಗೆ ಹೆದರದೆ ಅದರೊಂದಿಗೆ ಗುದ್ದಾಡುತ್ತಿರುವುದು ಮಾತ್ರ ಭಾರೀ ಅಚ್ಚರಿಯನ್ನುಂಟು ಮಾಡುತ್ತದೆ. ಒಂದು ಸಲ ಈ ವೀಡಿಯೋವನ್ನು ನೋಡಿದರೆ ಇದು ಮೊಲವೋ ಅಥವಾ ಮುಂಗುಸಿಯೋ ಎಂದು ಸಂದೇಹ ಬರುವಷ್ಟರ ಮಟ್ಟಿಗೆ ಮೊಲ ಹಾವಿನೊಂದಿಗೆ ಕಾದಾಡುತ್ತದೆ.

https://www.instagram.com/p/CcIt_ZDI5hE/?igshid=YmMyMTA2M2Y=

ವೈರಲ್ ವೀಡಿಯೊವನ್ನು predator.unity ಹೆಸರಿನ ಇನ್ಸ್ಟಾಗ್ರಾಮ್ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಅದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಸಾವಿರಾರು ಮಂದಿ ಈ ವೀಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಮೊಲ ಮತ್ತು ಹಾವಿನ ಕಾದಾಟದ ವಿಶೇಷ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾ ಇಷ್ಟಪಟ್ಟದ್ದಂತೂ ನಿಜ.

Leave A Reply

Your email address will not be published.