ಉಡುಪಿ: ಇನ್ನೇನು ತಾಳಿ ಕಟ್ಟಬೇಕೆಂದುಕೊಂಡಿದ್ದ ವರನಿಗೆ ಕಾದಿತ್ತು ಶಾಕ್!! ಕಾರ್ಯಗಳೆಲ್ಲಾ ಮುಗಿದು ಅದೊಂದೇ ಬಾಕಿ ಇರುವಾಗ ಆಕೆ ಹೀಗೆನ್ನಲು ಕಾರಣವೇನು!??

ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ನೀರಿನ ಗುಳ್ಳೆಯ ಹಾಗೇ ಕ್ಷಣಿಕ. ಯಾಕೆ ಈ ರೀತಿಯಾಗುತ್ತೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಂದು ಘಟನೆಯಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು ಬೀಳುವ ಎಷ್ಟೋ ಪ್ರಸಂಗಗಳು ನಮ್ಮ ಕಣ್ಣ ಮುಂದೆ ಇದೆ.

ಈಗ ಇಂಥದ್ದೇ ಒಂದು ಘಟನೆ ಕೃಷ್ಣನಗರಿ ಉಡುಪಿಯಲ್ಲಿ ನಡೆದಿದೆ. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧುವೊಬ್ಬಳು ತನಗೆ ಈ ಮದುವೆ ಇಷ್ಟವಿಲ್ಲವೆಂದು ಹೇಳಿ ವಿವಾಹವೊಂದು ಮುರಿದು ಬಿದ್ದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.


Ad Widget

Ad Widget

Ad Widget

ವರ ಮೂಲತಃ ಬ್ರಹ್ಮಾವರದವನಾಗಿದ್ದು, ವಿದೇಶದಲ್ಲಿ ಉದ್ಯೋಗ ಮಾಡುತ್ತಾನೆ. ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಳೆ. ಹಿರಿಯರ ಒಪ್ಪಿಗೆಯ ತೀರ್ಮಾನದಂತೆ 4 ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥವಾಗಿತ್ತು. ಇಬ್ಬರೂ ದೂರವಾಣಿ ಸಂಪರ್ಕದಲ್ಲಿದ್ದು ಎಲ್ಲವೂ ಚೆನ್ನಾಗಿಯೇ ಇತ್ತು. ಮದುವೆ ದಿನ ಹತ್ತಿರನೂ ಬಂತು. ಬರೋಬ್ಬರಿ 1000 ಮಂದಿಯ ಊಟದ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ವಧು ವರ ಮದುವೆ ಕ್ರಮಗಳೆಲ್ಲಾ ಮುಗಿದು ಇನ್ನೇನು ತಾಳಿ ಕಟ್ಟ ಬೇಕು ಎನ್ನುವಷ್ಟರಲ್ಲಿ ವಧು, ವರನನ್ನು ಅಲ್ಲಿಯೇ ಇದ್ದ ಹತ್ತಿರದ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್ ಇಷ್ಟಪಟ್ಟಿರುವುದಾಗಿ, ನೀನು ನನಗೆ ಇಷ್ಟ ಇಲ್ಲ ಎಂದು ಒಂದೇ ಉಸಿರಿಗೆ ತಿಳಿಸಿದ್ದಾಳೆ. ನೂರಾರು ಕನಸಿನೊಂದಿಗೆ ತನ್ನ ಭಾವೀ ಪತ್ನಿಯ ಜೊತೆ ಹೆಜ್ಜೆ ಇಡಬೇಕು ಎಂದು ಕನಸು ಕಂಡ ವರ ಈ ಮಾತಿನಿಂದ ದಿಗ್ಭ್ರಮೆಗೊಂಡಿದ್ದಾನೆ. ಕೊನೆಗೆ ದಿಕ್ಕು ತೋಚದೆ ಕುಟುಂಬದ ಮಂದಿಗೆ ಈ ವಿಷಯ ತಿಳಿಸಿದ್ದಾನೆ. ನಂತರ ಎರಡೂ ಕುಟುಂಬದವರ ಹಾಗೂ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ‌ನಡೆದಿದೆ. ಖರ್ಚಿನ ಸಮಪಾಲು ಹಾಕಲು ಒಪ್ಪುವುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು.

ಕೊನೆಗೆ ಮದುವೆ ಮುರಿದು ಬಿದ್ದಿದ್ದು ಬಂದ ಸಾವಿರಕ್ಕಿಂತಲೂ ಹೆಚ್ಚು ನೆಂಟರೆಲ್ಲಾ ಈ ಘಟನೆಯಿಂದ ಆಶ್ಚರ್ಯಗೊಂಡಿರುವುದಂತೂ ಸುಳ್ಳಲ್ಲ.

Leave a Reply

error: Content is protected !!
Scroll to Top
%d bloggers like this: