ಕೇವಲ 140 ರೂ. ಗೆ ಖರೀದಿಸಿ ಉರಿ ಸೆಖೆಯಿಂದ ರಿಲೀಫ್ ನೀಡುವ ಮಿನಿ ಸ್ಮಾರ್ಟ್ ಫೋನ್ ಫ್ಯಾನ್ !! | ಸ್ಮಾರ್ಟ್ ಫೋನ್ ಚಾಲಿತ ಈ ಫ್ಯಾನಿನ ಕುರಿತು ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಬೇಸಿಗೆ ಕಾಲ ಈಗಾಗಲೇ ಚಾಲ್ತಿಯಲ್ಲಿದ್ದು, ಈ ಉರಿಸೆಖೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪರದಾಡುವಂತಾಗಿದೆ. ಸಾಕಷ್ಟು ಜನರು ಫ್ಯಾನ್ ನ ಮೊರೆಹೋಗುತ್ತಾರೆ. ಕೆಲವು ಜನರು ತಮ್ಮ ಮನೆಯಲ್ಲಿ ಎಸಿ ಅಥವಾ ಕೂಲರ್ ಗಳನ್ನು ಬಳಸಲು ಮುಂದಾಗಿದ್ದಾರೆ. ಯಾಕೆಂದರೆ ಹಾಗಿದೆ ಇತ್ತೀಚೆಗಿನ ಬಿಸಿಲ ಝಳ.

ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸಾಧನ ನೀವು ಎಲ್ಲಿದ್ದರೂ ಕೂಡ ತಂಪಾಗಿರಿಸಬಲ್ಲದು ಎಂದರೆ ನಿಮಗೂ ಕೂಡ ಆಶ್ಚರ್ಯವಾದೀತು. ಹೌದು, ಸ್ಮಾರ್ಟ್ ಫೋನ್ ನಿಂದ ಕಾರ್ಯನಿರ್ವಹಿಸಲ್ಪಡುವ ಒಂದು ಮಿನಿ ಫ್ಯಾನ್ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.


Ad Widget

Ad Widget

Ad Widget

ಆನ್ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ನಲ್ಲಿ Buy Surety ಯ Micro USB Mini Smartphone Fan ಲಭಿಸುತ್ತಿದೆ. ಈ ಫ್ಯಾನ್ ಅನ್ನು ನೀವು ನಿಮ್ಮ ಅಂಗೈಯಲ್ಲಿ ಹಿಡಿಯಬಹುದು ಮತ್ತು ಇದನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಸಹಾಯದಿಂದ ಬಳಸಬಹುದು. ಈ ಫ್ಯಾನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೀವೂ ಕೂಡ ಯೋಚಿಸುತ್ತಿದ್ದರೆ, ಇದೊಂದು USB FAN ಆಗಿದೆ ಎಂಬುದು ನಿಮಗೆ ತಿಳಿದಿರಲಿ. ಇದನ್ನು ನೀವು ಸ್ಮಾರ್ಟ್ ಫೋನ್ ನ ಚಾರ್ಜಿಂಗ್ ಪೋರ್ಟ್ ಗೆ ಕನೆಕ್ಟ್ ಮಾಡಬಹುದು ಮತ್ತು ಬಳಸಬಹುದು.

ರೂ.140ಕ್ಕೆ ಖರೀದಿಸಿ ಈ ಫ್ಯಾನ್

ಫ್ಲಿಪ್ ಕಾರ್ಟ್ ಮೇಲೆ ಲಭ್ಯವಿರುವ ಈ Mini Smartphone Fanನ ಮೂಲ ಬೆಲೆ ರೂ.500 ಆಗಿದೆ. ಆದರೆ, ಇದನ್ನು ನೀವು ಸೆಲ್ (Summer Product) ನಲ್ಲಿ ಶೇ.70ರಷ್ಟು ಡಿಸ್ಕೌಂಟ್ ನಲ್ಲಿ ಅಂದರೆ ರೂ.149ಕ್ಕೆ ಖರೀದಿಸಬಹುದಾಗಿದೆ. ಇದನ್ನು ಖರೀದಿಸುವಾಗ ಒಂದು ವೇಳೆ ನೀವು ಫ್ಲಿಪ್ಕಾರ್ಟ್ ಎಕ್ಸಸೈ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ ಹೆಚ್ಚುವರು ಶೇ.5 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ ಹಾಗೂ ಇದನ್ನು ನೀವು ರೂ.142ಕ್ಕೆ ಖರೀದಿಸಬಹುದು.

ಈ Mini Smartphone Fan ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದ್ದು, ತೂಕದಲ್ಲಿ ತುಂಬಾ ಹಗುರವಾಗಿದೆ ಮತ್ತು ಇದನ್ನು ನೀವು ಸ್ಮಾರ್ಟ್ ಫೋನ್ ಪವರ್ ಬ್ಯಾಂಕ್ ಹಾಗೂ ಇತರೆ ಯುಎಸ್ಬಿ ಡಿವೈಸ್ ಗಳ ಸಹಾಯದಿಂದ ಬಳಸಬಹುದು. ಇದರ ಕೂಲಿಂಗ್ ಯುನಿಟ್ ನಲ್ಲಿ ಎರಡು ಪ್ಲಾಸ್ಟಿಕ್ ಬ್ಲೇಡ್ ಗಳಿವೆ ಹಾಗೂ ಇದರಲ್ಲಿ ಸಾಫ್ಟ್ ಫೊಮ್ ಬಳಸಲಾಗಿದೆ. ಬಿರುಬಿಸಿಲಿನಿಂದ ನೆಮ್ಮದಿ ಪಡೆಯಲು ಇದೊಂದು ಉತ್ತಮ ವಿಕಲ್ಪ ಎಂದೇ ಹೇಳಬಹುದು.

Leave a Reply

error: Content is protected !!
Scroll to Top
%d bloggers like this: