ಪುತ್ತೂರು : ಬೆಂಗಳೂರಿನಿಂದ ಮನೆಗೆ ಬಂದ ಯುವಕನಿಗೆ ಹೃದಯಾಘಾತ,ಸಾವು

Share the Article

ಪುತ್ತೂರು : ಬೆಂಗಳೂರಿನಿಂದ ಊರಿಗೆ ಬಂದ ದಿನವೇ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ.

ಈಶ್ವರಮಂಗಲ ಮುಗುಳಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್ (28) ಹೃದಯಾಘಾತದಿಂದ ಮೃತಪಟ್ಟ ಯುವಕ.

ಮೃತ ಯುವಕ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ಇಂದು ಬೆಳಗ್ಗೆ ಊರಿಗೆ ತಲುಪಿದ್ದರು.

ಮನೆಗೆ ಬಂದ ತಕ್ಷಣ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಗೆ ತಲುಪುತ್ತಿದ್ದಂತೆ ಮೃತಪಟ್ಟಿದ್ದಾರೆ.

Leave A Reply