ನಗರ ಪ್ರದೇಶದ ಮನೆಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ!

ಜಾನುವಾರುಗಳಿಗೆ ಯಾವುದೇ ತೊಂದರೆ ಇಲ್ಲದಂತೆ ಅವುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಿಂದ,ನಗರ ಪ್ರದೇಶದ ಮನೆಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಲಾಗಿದೆ.

ಈ ಕಠಿಣ ನಿಯಮವು ರಾಜಸ್ತಾನದಲ್ಲಿ ಜಾರಿಗೆ ತಂದಿದ್ದು,ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಕೌನ್ಸಿಲ್‌ಗಳ ಅಡಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಈ ಹೊಸ ಮಾನದಂಡ ಜಾರಿಗೊಳಿಸಲಾಗುತ್ತಿದೆ.ಜಾನುವಾರುಗಳಿಗೆ ಪ್ರತ್ಯೇಕ ಗೊತ್ತುಪಡಿಸಿದ ಜಾಗ ಹೊಂದಿರಬೇಕಾಗುತ್ತದೆ, ಪರವಾನಗಿ ಇಲ್ಲದೆ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಹಸು ಮತ್ತು ಕರು ಸಾಕಲು ಅನುಮತಿ ನೀಡಲಾಗುವುದಿಲ್ಲ ಎಂದು ಸಹ ಅಧಿಕಾರಿಗಳು ತಿಳಿಸಿದ್ದಾರೆ.


Ad Widget

Ad Widget

Ad Widget

ಅಲ್ಲದೆ 100 ಚದರ ವಿಸ್ತೀರ್ಣ ಹೊಂದಿರಲೇಬೇಕು, ನಿಯಮ ಉಲ್ಲಂಘಿಸಿದರೆ ಹತ್ತು ಸಾವಿರ ರೂ. ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದೆ.ಹೊಸ ನಿಯಮಗಳ ಅಡಿಯಲ್ಲಿ ಪರವಾನಗಿ ಪಡೆಯಲು ಅರ್ಜಿದಾರರು ವಿವರಗಳನ್ನು ಸಲ್ಲಿಸಬೇಕು, ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವುಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ಖಾತ್ರಿಕೊಡಬೇಕು.ವಾರ್ಷಿಕ ಪರವಾನಗಿ ಶುಲ್ಕವಾಗಿ 1,000 ರೂ. ವಿಧಿಸಲಾಗುತ್ತದೆ. ಶಿಕ್ಷಣ, ಧಾರ್ಮಿಕ ಮತ್ತು ಇತರ ಸಂಸ್ಥೆಗಳು ಅರ್ಧದಷ್ಟು ಶುಲ್ಕ ಮೊತ್ತವನ್ನು ಪಾವತಿಸಬೇಕಾಗುತ್ತದೆ.ಪ್ರಾಣಿಗಳಿಗೆ ಮಾಲೀಕರ ಹೆಸರು ಮತ್ತು ಸಂಖ್ಯೆಯನ್ನು ಕೂಡ ಟ್ಯಾಗ್ ಮಾಡಬೇಕಾಗುತ್ತದೆ ಎಂದು ಮಾಹಿತಿಯಲ್ಲಿ ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: