ಗರ್ಲ್ ಫ್ರೆಂಡ್ ಪ್ರೀತಿಗಿಂತ ಹೆಚ್ಚಾಯಿತು ಐಪಿಲ್ ಮೋಹ…ಪ್ರಿಯಕರನೋರ್ವನ ಪೋಸ್ಟರ್ ಸಖತ್ ವೈರಲ್!

ಕ್ರಿಕೆಟ್ ಶುರುವಾಯಿತಂದರೆ ಸಾಕು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಕೆಲವರಂತೂ ತಮ್ಮ
ಮನದಾಳದ ಮಾತುಗಳನ್ನು ಪೋಸ್ಟರ್‌ನಲ್ಲಿ ಬರೆದು, ಅದನ್ನು ಹಿಡಿದು ನಿಂತುಕೊಂಡಿರುತ್ತಾರೆ. ಇಂಥಹ ಕೆಲವು ಬರಹಗಳು ವೈರಲ್ ಆಗುತ್ತದೆ. ಇಂತದ್ದೇ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ ನಿಮಗೆ ನಗು ಬರುವುದಂತೂ ಖಂಡಿತ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2022 ಪಂದ್ಯದ ಸಂದರ್ಭದಲ್ಲಿ, ಅಭಿಮಾನಿಯೊಬ್ಬರು ‘ನನ್ನ ಗೆಳತಿ, ನಾನು ಬೇಕೋ ಅಥವಾ IPL ಬೇಕೋ ಎಂದು ಕೇಳಿದಳು. ಆದ್ರೆ, ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಬರೆದಿರುವ ಪೋಸ್ಟರ್ ವೈರಲ್ ಆಗಿದೆ.


Ad Widget

Ad Widget

Ad Widget

ಈ ಕ್ರಿಕೆಟ್ ಅಭಿಮಾನಿ ಕ್ರಿಕೆಟ್ ಹಾಗೂ ಪ್ರೀತಿಯ ಆಯ್ಕೆಯಲ್ಲಿ, ಕ್ರಿಕೆಟ್ ಆಯ್ಕೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾನೆ. ಇದನ್ನು ಪ್ರದರ್ಶಿಸಿದ ನಂತರ ಆತನ ಗರ್ಲ್ ಫ್ರೆಂಡ್ ಈತನ ಮೇಲೆ ಮುನಿಸು ತೋರಿದ್ದಾಳೋ ಅಥವಾ ಈತನೇ ಬೇಡ ಎಂದು ಬಿಟ್ಟು ಹೋಗಿದ್ದಾಳೋ ಗೊತ್ತಿಲ್ಲ, ಆದರೆ ಈತನ ನಿಜವಾದ ಪ್ರೀತಿ ಕ್ರಿಕೆಟ್ ಎಂದು ತೋರಿಸಿದ್ದಾನೆ. ಇದು ಆತನ ಐಪಿಎಲ್‌ನ ಮೇಲೆ ಆತನಿಗಿರುವ ಒಲವು ತೋರಿಸುತ್ತದೆ.

ಒಟ್ಟಿನಲ್ಲಿ ಅಭಿಮಾನಿಗಳು ನಿಜ ವಿಷಯಗಳನ್ನು ಬರೆದು ಪೋಸ್ಟರ್ ನಲ್ಲಿ ಪ್ರದರ್ಶನ ಮಾಡ್ತಿದ್ದಾರಾ? ಇಲ್ಲ ಇವೆಲ್ಲವೋ ಪ್ರಚಾರದ ಗಿಮಿಕ್ಕಾ ಅನ್ನೋದು ಅವರೇ ಹೇಳಬೇಕು.

Leave a Reply

error: Content is protected !!
Scroll to Top
%d bloggers like this: