‘ಕಚ್ಚಾಬಾದಾಮ್’ ಹಾಡಿಗೆ ನಾಗಿಣಿ ಸ್ಟೆಪ್ ಹಾಕಿದ ಮಹಿಳೆ; ಸಖತ್ ವೈರಲ್ ಈ ವೀಡಿಯೋ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಹಾಡು ಕಡಲೆಕಾಯಿ ಮಾರುವವನ ಹಾಡು. ಅದೇ…ಕಚ್ಚಾ ಬಾದಾಮ್ ಸಾಂಗ್…ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸೊಂಟ ಬಳುಕಿಸಿದ ಹಾಡೇ ಈ ಕಚ್ಚಾ ಬಾದಾಮ್ ಹಾಡು.
ಬುಬನ್ ಬದ್ಯಾಕರ್ ಎಂಬ ಸಾಮಾನ್ಯ ಕಡಲೆಕಾಯಿ ವ್ಯಾಪಾರಿಯ ಈ ಹಾಡು ಇಷ್ಟು ಪ್ರಸಿದ್ಧಿ ಪಡೆಯುತ್ತೆ ಅನ್ನೋದು ಮೂಲ ಹಾಡುಗಾರನಿಗೂ ತಿಳಿದಿರಲಿಲ್ಲವೇನೋ? ಸದ್ಯ ಈ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು, ಡ್ಯಾನ್ಸ್ ವಿಡಿಯೋ ತಮಾಷೆಯಿಂದ ಕೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿರುವ ಮಹಿಳೆ ತನ್ನ ನಾಲಿಗೆಯನ್ನು ಹಾವಿನಂತೆ ಹೊರಹಾಕಿ, ಜೊತೆಗೆ ಹಾವಿನಂತೆ ಕೈಗಳನ್ನು ಚಲಿಸುವ ಮೂಲಕ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಮಹಿಳೆಯ ಸ್ಟೆಪ್ಸ್ಗೆ ಸುತ್ತಮುತ್ತಲಿನ ಜನರು ನಗೆ ಬೀರಿದ್ದಾರೆ.
ಕಚ್ಚಾ ಬಾದಾಮ್ ಹಾಡಿಗೆ ಹಲವು ಮಂದಿ ಹಲವು ರೀತಿಯ ಡ್ಯಾನ್ಸ್ ಮಾಡಿದ್ದು, ನಾಗಿಣಿ ಸ್ಟೆಪ್ ಹಾಕಿ ಮಾಡಿದ ಈ ಡ್ಯಾನ್ಸ್ ಸಖತ್ ವೈರಲ್ ಆಗಿದೆ.