ಆತನ ಫ್ರಿಡ್ಜ್‌ನಲ್ಲಿತ್ತು 183 ನಾಯಿ, ಹಾವು, ಮೊಲ, ಹಲ್ಲಿಯ ಮೃತದೇಹ

ಕೊಲೆ ಮಾಡುವುದು,ಬೇರೆಯವರಿಗೆ ಹಿಂಸೆ ಕೊಟ್ಟು ಅದರಲ್ಲಿ ಆನಂದ ಅನುಭವಿಸುವಂತಹ ವಿಚಿತ್ರ ಮನುಷ್ಯರ ಬಗ್ಗೆ ನೀವು ಕೇಳಿರುತ್ತೀರಿ.

 

ಅಮೆರಿಕದ ಅರಿಜೋನಾದಲ್ಲಿ ಅಂತದ್ದೇ ಒಬ್ಬ ವಿಚಿತ್ರ ಮನುಷ್ಯ ಬರೋಬ್ಬರಿ 183 ಪ್ರಾಣಿಗಳನ್ನು ಕೊಂದು, ಮನೆಯ ಫ್ರಿಡ್ಜ್ ನಲ್ಲಿಟ್ಟುಕೊಂಡಿದ್ದ ವಿಚಾರ ಇದೀಗ ಹೊರಬಿದ್ದಿದೆ.

ಮೈಕಲ್ ಪ್ಯಾಟ್ರಿಕ್ ಟರ್ಲ್ಯಾಂಡ್ (43) ಹೆಸರಿನ ವ್ಯಕ್ತಿ ಗೋಲ್ಡನ್ ವ್ಯಾಲಿ ಎಂಬಲ್ಲಿ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಇತ್ತೀಚೆಗೆ ಆತ ಮನೆ ಖಾಲಿಮಾಡಿಕೊಂಡು ಬೇರೆ ನಗರದಲ್ಲಿ ವಾಸ ಹೂಡಿದ್ದಾನೆ. ಖಾಲಿಯಾಗಿದ್ದ ಮನೆಯನ್ನು ಸ್ವಚ್ಛ ಮಾಡಲೆಂದು ಮನೆಯ ಮಾಲಕ ಬಂದಾಗ ಆತನಿಗೆ ವಿಚಿತ್ರ ಕಾಣಿಸಿಕೊಂಡಿದೆ.ಅಲ್ಲಿದ್ದ ದೊಡ್ಡ ಫಿಡ್ಜ್‌ನಲ್ಲಿ ಹಾವು, ನಾಯಿ, ಮೊಲ, ಹಲ್ಲಿ ಸೇರಿ ಹಲವು ಪ್ರಾಣಿಗಳ ಮೃತ ದೇಹ ಪತ್ತೆಯಾಗಿದೆ.

Leave A Reply

Your email address will not be published.