ರೈಲು ಮೈಮೇಲೆ ಹೋದ್ರೂ ಮೊಬೈಲ್ ಸಂಭಾಷಣೆಯಲ್ಲೇ ಮಹಿಳೆ ಬ್ಯುಸಿ, ವಿಡಿಯೋ ವೈರಲ್!
ನಿಜವೋ ಸುಳ್ಳೋ ಎಂದು ಭ್ರಮೆ ಸೃಷ್ಟಿಸುವ ಘಟನೆ !
ನಿಜವೋ ಸುಳ್ಳೋ ಎಂದು ಭ್ರಮೆ ಸೃಷ್ಟಿಸುವ ಘಟನೆ ಇದು. ನಂಬಲು ಕಷ್ಟ, ಆದ್ರೆ ಇದು ನಿಜ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಜನ ಲೋಕವನ್ನೇ ಮರೆತುಬಿಡ್ತಾರೆ. ಮೊಬೈಲ್ ಗೆ ಅಡಿಕ್ಟ್ ಆಗಿರುವವರ ವರ್ತನೆ ಹೇಗೆಲ್ಲಾ ಇರುತ್ತೆ ಅನ್ನೋದಕ್ಕೆ ಒಂದು ಅತಿರೇಕದ ಉದಾಹರಣೆ ಬೇಕಿದ್ರೆ ಇದಕ್ಕಿಂತ ಬೇರೆ ಯಾವ ಲೋಕದಲ್ಲೂ ಸಿಗದು. ಇಲ್ಲೊಂದು ವಿಡಿಯೋ ನಿಮ್ಮನ್ನು ಖಂಡಿತಾ ದಂಗು ಬಡಿಸಲಿದೆ. ಬೆಚ್ಚಿಬೀಳಿಸುವ ಈ ವೀಡಿಯೊ ನೋಡುವ ಮೊದಲು ವಿಷಯ ಏನಾಯ್ತು ಅಂತ ತಿಳಿದುಕೊಳ್ಳಿ.
ಗೂಡ್ಸ್ ರೈಲೊಂದು ದೊಡ್ಡ ಸದ್ದು ಮಾಡುತ್ತಾ, ಹಾರ್ನ್ ಬಡಿಯುತ್ತಾ ಮುನ್ನುಗ್ಗಿ ಬರ್ತಿದೆ. ಹಾಗೆ ಬಂದ ರೈಲು ನಿಲ್ದಾಣವನ್ನು ದಾಟುತ್ತಿದ್ದು, ರೈಲು ಹಾದುಹೋದ ಟ್ರ್ಯಾಕ್ ನ ಮೇಲೆಯೆ ನಿಟಾರನೆ ಮಲಗಿ ಮೊಬೈಲಿನಲ್ಲಿ ಸಾವಕಾಶವಾಗಿ, ಕಾಲಕ್ಷೇಪ ಮಾಡುತ್ತಾ, ಹರಟೆ ಹೊಡೆಯುತ್ತಾ ಇದ್ದ ಮಹಿಳೆಯೊಬ್ಬರು ಏನೂ ಆಗೇ ಇಲ್ಲವೆಂಬಂತೆ ಎದ್ದೇಳಿ ಕೂತು ಮತ್ತೆ ಮೊಬೈಲ್ ನಲ್ಲಿ ಹರಟೆಗೆ ತೊಡಗುತ್ತಾಳೆ.
https://twitter.com/i/status/1513858274034348035
ರೈಲು ತಮ್ಮ ಮೇಲೆ ಹಾದು ಹೋದರೂ ಕೊಂಚವೂ ಧೃತಿಗೆಡದಂತೆ ಕಂಡುಬರುವ ಮಹಿಳೆ, ಕೆಲ ಕ್ಷಣಗಳ ಕಾಲ ಹಾಗೇ ಕೂತಿದ್ದು, ನಂತರ ಮೊಬೈಲ್ ನಂತೆ ಆರಾಮಾಗಿ ಮೊಬೈಲ್ ನಲ್ಲಿ ಮಾತಾಡುತ್ತ ಸಾಗುತ್ತಾಳೆ. ಅದೊಂದು ಮಾಮೂಲಿ ಸಂಗತಿ ಎನ್ನುವಂತೆ ಆಕೆ ನಡೆದುಕೊಳ್ಳುವುದು ಆಕೆ ಒಬ್ಬಳು ಅತಿಮಾನುಷ ವ್ಯಕ್ತಿಯೇನೋ ಎಂಬ ಭಾವನೆ ಮೂಡಿಸುತ್ತದೆ. ಆಕೆ ನಂತರ ಟ್ರ್ಯಾಕ್ ನಿಂದ ಹೊರಬರುತ್ತಾ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯೊಂದಿಗೆ ಏನೋ ಮಾತನಾಡುತ್ತಿರುವುದು ಕೂಡಾ ಕಂಡುಬಂದಿದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾಅವರು ಏಪ್ರಿಲ್ 12 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ಟ್ವಿಟರ್ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಕೆಲವರು ಮಹಿಳೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವರು ಎಷ್ಟರ ಮಟ್ಟಿಗೆ ಇದರಿಂದ ಡಿಸ್ಟರ್ಬ್ ಆಗಿದ್ದಾರೆ ಎಂದರೆ, ಆ ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ಕಚೇರಿಗೆ ವಿಡಿಯೋ ಟ್ಯಾಗ್ ಮಾಡಿದ್ದಾರೆ.