ಮುಂಜಾನೆ ಎದ್ದ ತಕ್ಷಣ ಕಣ್ಣಿಗೆ ಕಾಣುವ ಕೆಲ ವಸ್ತುಗಳಿಂದನೇ ಅಳೆಯಲಾಗುತ್ತದೆ ಆ ದಿನದ ಶುಭ-ಅಶುಭ!! ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಆ ವಸ್ತುಗಳು ಯಾವುದು ಗೊತ್ತಾ!??

ರಾತ್ರಿ ಇಳಿದು ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವ ಮುಂಜಾನೆಯಲ್ಲಿ ಹೊಚ್ಚ ಹೊಸ ಕನಸುಗಳನ್ನು ಕಟ್ಟಿಕೊಂಡು ನಿದ್ದೆಯಿಂದ ಏಳುವಾಗ ತಕ್ಷಣಕ್ಕೆ ಕಾಣುವ ಕೆಲ ವಸ್ತುಗಳು ವ್ಯಕ್ತಿಯ ಆ ದಿನದ ಶುಭ-ಅಶುಭದ ಬಗ್ಗೆ ಹೇಳುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂತೆಯೇ ಮುಂಜಾನೆ ಎದ್ದ ಕೂಡಲೇ ಕಾಣುವ ವಸ್ತುಗಳಿಂದನೇ ಹಳ್ಳಿಗಳಲ್ಲಿ ಆ ದಿನದ ಶುಭ-ಅಶುಭಗಳ ಲೆಕ್ಕಾಚಾರ ಮಾಡುವ ಕಟ್ಟುಪಾಡು ಇಂದಿಗೂ ಜೀವಂತವಿದೆ.

ಹಾಗಾದರೆ ಮುಂಜಾನೆ ಎದ್ದ ಕೂಡಲೇ ಯಾವ ವಸ್ತಗಳನ್ನು ಕಾಣಬೇಕು!??..
ಹೌದು, ಮುಂಜಾನೆ ಎದ್ದ ಕೂಡಲೇ ಏನನ್ನು ಕಾಣಬೇಕು ಎನ್ನುವ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡಿರುವುದು ಸಹಜ. ಎದ್ದಾಕ್ಷಣ ಹಲ್ಲಿಯನ್ನು ಕಂಡರೆ ಶುಭ ಎನ್ನುತ್ತದೆ ಶಾಸ್ತ್ರ.ಹಲ್ಲಿಯನ್ನು ನೋಡುವುದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಪ್ರಾಪ್ತಿಯಾಗಿ, ಶುಭ ದಿನವಾಗಿ ಪರಿಣಮಿಸುತ್ತದೆ.

ಗೋಡೆಯ ಮೇಲೆ ಮೇಲ್ಮುಖವಾಗಿ ಚಲಿಸುವ ಹಲ್ಲಿಯನ್ನು ಕಂಡರಂತೂ ಕೆಲಸದಲ್ಲಿ ಪ್ರಗತಿ ಹಾಗೂ ಉತ್ತಮ ಲಾಭ ಬರುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಜ್ಯೋತಿಷ್ಯದ ಪ್ರಕಾರ ಹಲ್ಲಿಯನ್ನು ಸಂಪತ್ತಿನ ಸಂಕೇತ ಎಂದು ಕರೆಯಲಾಗಿದ್ದು, ಅದಲ್ಲದೆ ಅಚಾನಕ್ ಆಗಿ ವ್ಯಕ್ತಿಯೊಬ್ಬನ ತಲೆಯ ಮೇಲೆ ಹಲ್ಲಿ ಬಿದ್ದರೆ ಗೌರವ, ಘನತೆಯೂ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ವ್ಯಕ್ತಿಯ ಬಲ ಭುಜದ ಮೇಲೆ ಹಲ್ಲಿ ಬಿದ್ದರೆ ಎಲ್ಲದರಲ್ಲೂ ಗೆಲುವು ಕಾಣಲಿದ್ದು, ಹಣೆಯ ಮೇಲೆ ಬಿದ್ದರೆ ಆ ದಿನ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಂಭವ ಹೆಚ್ಚಾಗಿರುತ್ತದೆ ಹಾಗೂ ಎಡ ಭುಜದ ಮೇಲೆ ಹಲ್ಲಿ ಬಿದ್ದರೆ ದ್ವೇಷ ಹೆಚ್ಚಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

Leave A Reply

Your email address will not be published.