ಶೀರಾಡಿ: ಘಾಟಿ ಪ್ರದೇಶದಲ್ಲಿ ಬೀಡು ಬಿಟ್ಟ ಒಂಟಿ ಸಲಗ!! ಪ್ರಯಾಣಿಕರಲ್ಲಿ ಭೀತಿ-ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ

ಮಂಗಳೂರು ಬೆಂಗಳೂರು ರಾಷ್ಟೀಯ ಹೆದ್ದಾರಿಯ ಶೀರಾಡಿ ಘಾಟ್ ನಲ್ಲಿ ಕೆಲ ದಿನಗಳಿಂದ ಒಂಟಿ ಸಲಗವೊಂದು ಪ್ರಯಾಣಿಕರಿಗೆ ಉಪಟಳ ನೀಡುತ್ತಿರುವ ಬಗ್ಗೆ ಸುದ್ದಿಯಾಗಿದ್ದರೂ ಈ ವರೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಕೆಲ ದಿನಗಳಿಂದ ಶೀರಾಡಿಯ ರಸ್ತೆ ಬದಿಯಲ್ಲೇ ಬೀಡು ಬಿಟ್ಟಿರುವ ಒಂಟಿ ಸಲಗವು ದಾರಿಹೋಕರಿಗೆ ಉಪಟಳ ನೀಡುತ್ತಿದ್ದು, ಆನೆಯ ಆರ್ಭಟಕ್ಕೆ ಕೆಲ ದ್ವಿಚಕ್ರ ವಾಹನ ಸವಾರರು ಪ್ರಾಣ ಭಯದಿಂದ ವಾಹನವನ್ನೇ ಬಿಟ್ಟು ಓಡಿ ಹೋಗಿರುವ ಪ್ರಸಂಗವೂ ನಡೆದಿದ್ದು, ಇಂದು ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ


Ad Widget

Ad Widget

Ad Widget

ಸದ್ಯ ಒಂಟಿ ಸಲಗದ ಉಪದ್ರ ತಾಳಲಾರದೇ ಪ್ರಯಾಣಿಕರು ಕಂಗೆಟ್ಟಿದ್ದು, ಅರಣ್ಯ ಇಲಾಖೆಯು ತುರ್ತು ಕ್ರಮ ಕೈಗೊಂಡಲ್ಲಿ ಪ್ರಾಣ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

Leave a Reply

error: Content is protected !!
Scroll to Top
%d bloggers like this: