ಶರ್ಟ್ ಹಿಂಭಾಗದಲ್ಲಿ ‘ಲೂಪ್’ ಅಥವಾ ‘ಕುಣಿಕೆ’ ಇರಲು ಕಾರಣವೇನು ಗೊತ್ತೇ…?

ಶರ್ಟ್ ಎಲ್ಲರೂ ಇಷ್ಟಪಡುವ ಉಡುಗೆಗಳಲ್ಲಿ ಒಂದು. ಈ
ಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಈ ಚಿಕ್ಕ ಕುಣಿಕೆಯನ್ನು (ಲೂಪ್) ಇಡೋದಕ್ಕೂ ಒಂದು ಕಾರಣವಿದೆ.

ಫ್ಯಾಷನ್ ದಿನೇ ದಿನೇ ಬದಲಾದ್ರೂ ಈ ಪುರುಷರ ಆ ಲೂಪ್ ಮಾತ್ರ 1960 ರಿಂದ ಪ್ರಾರಂಭಗೊಂಡಿತ್ತು. ಈ ವಿನ್ಯಾಸವನ್ನು ಈಸ್ಟ್ ಕೋಸ್ಟ್ ನಾವಿಕರಿಗಾಗಿ ವಿನ್ಯಾಸ ಮಾಡಲಾಗಿತ್ತು.

ಹ್ಯಾಂಗರ್ ಗಳ ಬದಲಿಗೆ ಅಂಗಿಯನ್ನು ತಂತಿಗಳ ಮೇಲೆ ನೇತು ಹಾಕಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಕುಣಿಕೆಗಳ ಮೂಲಕ ನೇತು ಹಾಕಿಟ್ಟರೆ ಶರ್ಟ್ ಮುದುಡಿ ಹೋಗುವ ಪ್ರಮೇಯ ಇರುವುದಿಲ್ಲ. ನಾವಿಕರು ಅದನ್ನು ಮರುದಿನ ಧರಿಸಬಹುದು ಅನ್ನೋ ಉದ್ದೇಶವೇ ಈ ಕುಣಿಕೆ ಇಟ್ಟಿರುವ ಉದ್ದೇಶ.

ಅನಂತರ ಅಂಗಿಗಳ ಹಿಂಭಾಗದಲ್ಲಿ ಕುಣಿಕೆ ಇಡುವ ಟ್ರೆಂಡ್ ಸಮುದ್ರದಿಂದ ನಗರ ಪರಿಸರವಾಸಿಗಳತ್ತ ಬಂತು. 1960 ರಲ್ಲಿ ಅಮೆರಿಕ, ಇಂತಹ ಶರ್ಟ್ ಗಳನ್ನು ತಯಾರಿಸಲು ಆರಂಭಿಸಿತು. ಜಿಮ್ ಲಾಕರ್ ಗಳಲ್ಲಿ ತಮ್ಮ ಅಂಗಿಯನ್ನು ನೇತುಹಾಕಲು ಪುರುಷರು ಕುಣಿಕೆಯನ್ನು ಬಳಸುತ್ತಿದ್ರು.

Leave A Reply

Your email address will not be published.