ಪುತ್ತೂರು : ಎ.17 ರಿಂದ 19 ರವರೆಗೆ ಮದ್ಯದಂಗಡಿ ಬಂದ್!!!

Share the Article

ಪುತ್ತೂರು : ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಎ.19ರವರೆಗೆ ನಡೆಯಲಿದ್ದು ಎ.17ರ ಬೆಳಿಗ್ಗೆ 8ರಿಂದ ಎ.19ರ ಬೆಳಿಗ್ಗೆ 6 ಗಂಟೆಯವರೆಗೆ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ವೈನ್ ಶಾಪ್ ಮತ್ತು ಬಾರ್‌ಗಳನ್ನು ಬಂದ್ ಮಾಡಿ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ಎ.17ರಂದು ಶ್ರೀದೇವರ ಬ್ರಹ್ಮರಥೋತ್ಸವ ಹಾಗೂ 18ರಂದು ದೇವರ ಅವಭ್ರತ ಸವಾರಿ ನಡೆಯಲಿದ್ದು ದೇವಸ್ಥಾನದ ಪರಿಸರ ಹಾಗೂ ಶ್ರೀದೇವರ ಸವಾರಿ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವೈನ್ ಶಾಪ್, ಬಾರ್ ಹಾಗೂ ವಿವಿಧ ಅಮಲು ಪದಾರ್ಥ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Leave A Reply