ಇಂಡಕ್ಷನ್ ಸ್ಟವ್ ಸ್ಫೋಟ : ಮಹಿಳೆ ಗಂಭೀರ ಗಾಯ!

ಕರೆಂಟ್ ಇಂಡಕ್ಷನ್ ಸ್ಟವ್‌ನಲ್ಲಿ ಅಡುಗೆ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಮಹಿಳೆಯೋರ್ವಳು ಗಂಭೀರ ಗಾಯಗೊಂಡಿದ್ದಾರೆ.

ಶೋಭಾ ( 40 ವರ್ಷ) ಎಂಬುವವರೇ ಗಂಭೀರ ಗಾಯಗೊಂಡ ಮಹಿಳೆ.


Ad Widget

Ad Widget

Ad Widget

ಮನೆಯಲ್ಲಿದ್ದ ದಿನ ಬಳಕೆ ವಸ್ತು ಸೇರಿದಂತೆ ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಈ ಘಟನೆ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ಸಂಭವಿಸಿದೆ. ಇಂಡಕ್ಷನ್ ಸ್ಟವ್‌ನಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಮಹಿಳೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: